ಪ್ರಾಣಕ್ಕೆ ಕುತ್ತು ತಂದ ಜೋಕಾಲಿ ಆಟ: 13 ವರ್ಷದ ಬಾಲಕ ಸಾವು.

ದಾವಣಗೆರೆ,ಫೆಬ್ರವರಿ,24,2024(www.justkannada.in):  ಜೋಕಾಲಿ ಆಡುವ ವೇಳೆ ಕುತ್ತಿಗೆಗೆ ಹಗ್ಗ ಸಿಲುಕಿ 13 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸವಳಂಗದಲ್ಲಿ ಈ ಘಟನೆ ನಡೆದಿದೆ. ಫೆ.21 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  ಕೊಟ್ರೇಶ್(13) ಮೃತಪಟ್ಟ ಬಾಲಕ.

ಮನೆಯಲ್ಲಿ ಜೋಕಾಲಿ ಆಡುತ್ತಿದ್ದ ವೇಳೆ ಹಗ್ಗ ಕುತ್ತಿಗೆಗೆ ಸಿಲುಕಿ ಈ ಘಟನೆ ನಡೆದಿದೆ. ಬಾಲಕ ಶಿವಮೊಗ್ಗದ ಖಾಸಗಿ ಶಾಲೆಯಲ್ಲಿ 7 ನೇ ತರಗತಿ ಓದುತ್ತಿದ್ದನು ಎನ್ನಲಾಗಾಗಿದೆ. ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Key words: 13-year-old boy- dies-jokali -game