ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್’ಶಿಪ್ ಗೆದ್ದ ಪಿ.ವಿ.ಸಿಂಧು

0
1

ಬೆಂಗಳೂರು, ಜುಲೈ 17, 2022 (www.justkannada.in): ಸಿಂಗಾಪುರ ಓಪನ್‌ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​ನ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಪಿ.ವಿ. ಸಿಂಧು ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.

ಚೀನಾದ ವಾಂಗ್ ಝಿ ಯಿ ವಿರುದ್ದ ನಡೆದ ಫೈನಲ್​ ಪಂದ್ಯದಲ್ಲಿ ಭಾರತೀಯ ತಾರೆ ಭರ್ಜರಿ ಪ್ರದರ್ಶನ ನೀಡಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಆರಂಭದಿಂದಲೇ ವಾಂಗ್ ವಿರುದ್ದ ಮೇಲುಗೈ ಸಾಧಿಸಿದ್ದ ಸಿಂಧು, ಮೊದಲ ಸೆಟ್​ ಅನ್ನು 21-9 ಅಂತರದಿಂದ ಗೆದ್ದುಕೊಂಡರು.

2ನೇ ಸೆಟ್​ನಲ್ಲಿ ವಾಂಗ್ ಝಿ ಯಿ ಕಂಬ್ಯಾಕ್ ಮಾಡಿದ್ದರು. ದ್ವಿತೀಯ ಸೆಟ್​ನ ಆರಂಭದಲ್ಲೇ ಅತ್ಯುತ್ತಮ ಸ್ಮ್ಯಾಶ್ ಮೂಲಕ 6 ಪಾಯಿಂಟ್ ಕಲೆಹಾಕಿ ಒತ್ತಡಕ್ಕೆ ಸಿಲುಕಿಸಿದ್ದರು. ಪರಿಣಾಮ ಎರಡನೇ ಸೆಟ್ ಅನ್ನು ಪಿವಿ ಸಿಂಧು 11-21 ಅಂತರದಿಂದ ಸೋತರು.

ಮೊದಲೆರಡು ಸೆಟ್​​ಗಳಲ್ಲಿ ಇಬ್ಬರಿಂದಲೂ ಭರ್ಜರಿ ಪ್ರದರ್ಶನ ಮೂಡಿಬಂದಿದ್ದ ಕಾರಣ ಅಂತಿಮ ಸೆಟ್​​ನಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಲಾಗಿತ್ತು. ಅಂತಿಮವಾಗಿ 21-15 ರ ಅಂತರದಿಂದ ಗೆಲ್ಲುವ ಮೂಲಕ ಸಿಂಗಾಪುರ್ ಓಪನ್​ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​ನಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದರು.