Friday, August 7, 2026

BDA Apartments

Home Front Page ಅಗ್ನಿವೀರ್  ದಿಟ್ಟ ಯೋಜನೆ: ವಿಪಕ್ಷಗಳು ಯುವಕರ ದಾರಿ ತಪ್ಪಿಸುತ್ತಿವೆ- ಪ್ರಧಾನಿ ಮೋದಿ ವಾಗ್ದಾಳಿ

ಅಗ್ನಿವೀರ್  ದಿಟ್ಟ ಯೋಜನೆ: ವಿಪಕ್ಷಗಳು ಯುವಕರ ದಾರಿ ತಪ್ಪಿಸುತ್ತಿವೆ- ಪ್ರಧಾನಿ ಮೋದಿ ವಾಗ್ದಾಳಿ

ನವದೆಹಲಿ,ಜುಲೈ,26,2024 (www.justkannada.in): ಅಗ್ನಿವೀರ್  ದಿಟ್ಟ ಯೋಜನೆಯಾಗಿದೆ. ಆದರೆ ದೇಶದ ರಕ್ಷಣೆ ವಿಷಯದಲ್ಲೂ ವಿಪಕ್ಷಗಳು ರಾಜಕೀಯ ಮಾಡುತ್ತಿವೆ.  ವಿಪಕ್ಷಗಳು ಯುವಕರ ದಾರಿ ತಪ್ಪಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

ಇಂದು ಕಾರ್ಗಿಲ್ ವಿಜಯ ದಿವಸ ಹಿನ್ನೆಲೆಯಲ್ಲಿ ಹುತಾತ್ಮ ಯೋಧರಿಗೆ ನಮಿಸಿ ಮಾತನಾಡಿದ ಪ್ರಧಾನಿ ಮೋದಿ,  ಇತಿಹಾಸ ಪುಟದಲ್ಲಿ ಯೋಧರ ತ್ಯಾಗ ಬಲಿದಾನ ಎಂದಿಗೂ ಅಮರ.  ನನಗೆ ದೇಶ ಮೊದಲು ನಂತರ ಪಕ್ಷ.  ವಿಪಕ್ಷಗಳೂ ಯುವಕರ ದಾರಿ ತಪ್ಪಿಸುತ್ತಿವೆ.  ನಾವು ದೇಶ ಕಟ್ಟುತ್ತಿದ್ದೇವೆ  ಪಕ್ಷವನ್ನಲ್ಲ.  ವಿಪಕ್ಷ ದೇಶದ ರಕ್ಷಣೆ ವಿಷಯದಲ್ಲೂ ಅಡ್ಡಗಾಲು ಹಾಕುತ್ತಿದೆ ಎಂದು ಗುಡುಗಿದರು.

ಪಾಕಿಸ್ತಾನಕ್ಕೆ ಪರೀಕ್ಷ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ,  ಇತಿಹಾಸದ ತಪ್ಪುಗಳಿಂದ ಪಾಕ್ ಪಾಠ ಕಲಿತಿಲ್ಲ. ಉಗ್ರರ ತಂತ್ರಗಳು ನಮ್ಮ ಮುಂದೆ ನಡೆಯಲ್ಲ.  ಜಮ್ಮು ಕಾಶ್ಮೀರದ ಅಭಿವೃದ್ದಿಯನ್ನ ತಡೆಯಲು ಆಗಲ್ಲ. ಉಗ್ರರ ಪ್ರತಿ ಸವಾಲನ್ನು ನಾವು  ಮೆಟ್ಟಿ ನಿಲ್ಲುತ್ತೇವೆ. ಪಾಕಿಸ್ತಾನವನ್ನ ಉಗ್ರರ ಮಾಲೀಕ ಎಂದು ಪ್ರಧಾನಿ ಮೋದಿ ಲೇವಡಿ ಮಾಡಿದರು.

Key words: Agniveer, Opposition, misleading, youth, PM Modi