ಪಿಎಸ್ ಐ ನೇಮಕಾತಿ ಹಗರಣ: ಬಂಧಿತ ಡಿವೈಎಸ್ಪಿ 12 ದಿನಗಳ ಕಾಲ ಸಿಐಡಿ ಕಸ್ಟಡಿಗೆ.

ಬೆಂಗಳೂರು,ಮೇ,13,2022(www.justkannada.in): ಪಿಎಸ್ ಐ ನೇಮಕಾತಿ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತ ಡಿವೈಎಸ್ಪಿ ಶಾಂತಕುಮಾರ್ ಅವರನ್ನ 12 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.

ಪಿಎಸ್ ಐ ಹಗರಣಕ್ಕೆ ಸಂಬಂಧಿಸಿದಂತೆ ನೇಮಕಾತಿ ವಿಭಾಗದ ಡಿವೈಎಸ್ಪಿಯಾಗಿದ್ದ ಶಾಂತಕುಮಾರ್ ರನ್ನು ಸಿಐಡಿ ನಿನ್ನೆ ಬಂಧಿಸಿ ಇಂದು ನ್ಯಾಯಾಲಯದ ಎದುರು ಹಾಜರುಪಡಿಸಿತ್ತು. ಇದೀಗ ಶಾಂತಕುಮಾರ್ ರನ್ನು 12 ದಿನಗಳ ಕಾಲ ಸಿಐಡಿ ವಶಕ್ಕೆ ನೀಡಿ .  ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.

ಅಂತರಿಕ ಭದ್ರತಾ ವಿಭಾಗದಲ್ಲಿದ್ದ ಶಾಂತಕುಮಾರ್ ನಿಯೋಜನೆ ಮೇರೆಗೆ ಪೊಲೀಸ್ ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಪಿಎಸ್ ಐ ಅಕ್ರಮ ಬಗ್ಗೆ ಪ್ರಕರಣ ದಾಖಲಾಗುತ್ತಿದ್ದಂತೆ ಆತಂರಿಕ ಭದ್ರತಾ ವಿಭಾಗಕ್ಕೆ ಅವರನ್ನ ಕಳುಹಿಸಲಾಗಿತ್ತು.

Key words: PSI -recruitment –scam-Arrested -DYSP – 12 days-CID- custody.