ಅವಿಶ್ವಾಸ ನಿರ್ಣಯ ನಮಗೆ ಶುಭಸೂಚಕ: 2024ರಲ್ಲೂ ಹೆಚ್ಚು ಸ್ಥಾನಗಳನ್ನ ಗೆದ್ದು ಅಧಿಕಾರಕ್ಕೆ ಬರುತ್ತೇವೆ- ಪ್ರಧಾನಿ ಮೋದಿ.

ನವದೆಹಲಿ,ಆಗಸ್ಟ್,10,2023(www.justkannada.in):  ವಿಪಕ್ಷಗಳ ಅವಿಶ್ವಾಸ ನಿರ್ಣಯ ನಮಗೆ ಶುಭಸೂಚಕ.  2024ರಲ್ಲೂ ಹೆಚ್ಚು ಸ್ಥಾನಗಳನ್ನ ಗೆದ್ದು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರದ ಮೇಲೆ ಜನತೆಗೆ ವಿಶ್ವಾಸವಿದೆ.  ಎನ್ ಡಿಎ ಬಲ ಇಂಡಿಯಾದ ಬಲ. ವಿಪಕ್ಷಗಳ ಅವಿಶ್ವಾಸ ನಮಗೆ ಶುಭಸೂಚಕ.  ಅವಿಶ್ವಾಸ ಮಂಡಿಸಿದ್ದಕ್ಕೆ ವಿಪಕ್ಷಗಳಿಗೆ ಧನ್ಯವಾದಗಳು. ಜನರು ಕೂಡ ಇವರ ಬಗ್ಗೆ ಅವಿಶ್ವಾಸ ಘೋಷಿಸಿದ್ರು. ಅವಿಶ್ವಾಸ  ನಮ್ಮ ಸರ್ಕಾರಕ್ಕೆ ಪರೀಕ್ಷೆ ಅಲ್ಲ. ವಿಪಕ್ಷಕ್ಕೆ ಮಾತ್ರ.  ದೇಶಕ್ಕಿಂತ ಹೆಚ್ಚು ಅವರ ಪಕ್ಷಗಳ ಬಗ್ಗೆ ಚಿಂತಿಸುತ್ತಾರೆ. ಯುವಕರಿಗಿಂತ ತಮ್ಮ ರಾಜಕೀಯದ್ದೇ ಚಿಂತೆಯಾಗಿದೆ.  ಸ್ವಲ್ಪ ಸಿದ್ದರಾಗಿ ಬನ್ನಿ ಎಂದು ಕಳೆದ ಬಾರಿಯೇ ಹೇಳಿದ್ದೆ. ನಿಮ್ಮ ಒಂದೊಂದು ಶಬ್ದವನ್ನ ಜನರು ಕೇಳುತ್ತಿದ್ದಾರೆ ಎಂದರು.

ವಿಪಕ್ಷ ನಾಯಕರೇ ಫೀಲ್ಡಿಂಗ್ ಆರ್ಗನೈಸ್‌ ಮಾಡಿದ್ದರು. ಆದರೆ ಸಿಕ್ಸ್, ಫೋರ್​ ಗಳು ನಮ್ಮ ಕಡೆಯಿಂದ ಹೋದವು. ವಿಪಕ್ಷ ನಾಯಕರು ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ಬರೀ ನೋ ಬಾಲ್ ಎಸೆಯುತ್ತಿದ್ದಾರೆ. ನಮ್ಮ ಸದಸ್ಯರು ಸೆಂಚುರಿ ಬಾರಿಸುತ್ತಿದ್ದಾರೆ. ಎಲ್ಲರೂ ಶ್ರಮ ಪಡಿ, 2018ರಲ್ಲೂ ಇದನ್ನ ಹೇಳಿದ್ದೇನೆ. ಶ್ರಮ ಮಾಡೋದಕ್ಕೆ 5 ವರ್ಷ ನೀಡಿದ್ದೇನೆ. ಏನು ದಾರಿದ್ರ್ಯ ನೋಡಿ ಇನ್ನೂ ಸರಿಯಾಗಿಲ್ಲ ಎಂದು ವಿಪಕ್ಷಗಳನ್ನು ವ್ಯಂಗ್ಯವಾಡಿದರು.

ವಿಪಕ್ಷಗಳ ಆಡೋ ಒಂದೊಂದು ಮಾತನ್ನ ಜನರು ನೋಡುತ್ತಿದ್ದಾರೆ. ಯಾವಾಗಲೂ ನಿರಾಸೆಯಿಂದಲೇ ವಿಪಕ್ಷಗಳು ಮಾತನಾಡುತ್ತಿವೆ. ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ, ಒಂದು ವಿಚಿತ್ರ ಇದೆ. 1999ರಲ್ಲೂ ಅವಿಶ್ವಾಸ ನಿರ್ಣಯವನ್ನ ಮಂಡಿಸಿದ್ದರು. ಶರದ್ ಪವಾರ್ ಅವರು ನೇತೃತ್ವದಲ್ಲಿ ಅವಿಶ್ವಾಸ ಮಂಡನೆ ಮಾಡಲಾಗಿತ್ತು. 2003ರಲ್ಲಿ ವಾಜಪೇಯಿ ಸರ್ಕಾರ ಇದ್ದಾಗಲೂ ಮಂಡಿಸಲಾಗಿತ್ತು. ಆಗ ಸೋನಿಯಾ ಗಾಂಧಿ ವಿಪಕ್ಷ ನಾಯಕರಾಗಿದ್ದರು. 2018ರಲ್ಲಿ ಮಲ್ಲಿಕಾರ್ಜುನ ಖರ್ಗೆ ವಿಪಕ್ಷ ನಾಯಕರಾಗಿದ್ದರು. ಹೊಸ ಸಂಕಲ್ಪ, ಕನಸಿನ ಹೊತ್ತು ಹೆಜ್ಜೆ ಹಾಕುತ್ತಿದ್ದೇವೆ. ಅನುಭವದಿಂದ ನಾನು ಮಾತನಾಡುತ್ತಿದ್ದೇನೆ. ಭಾರತಕ್ಕೆ ಇದು ಗೋಲ್ಡನ್ ಎರಾ ಆಗಿದೆ. ಈ ಸಮಯ ದೇಶಕ್ಕೆ ಮಹತ್ವಪೂರ್ಣ ಆಗಿದೆ ಎಂದರು.

13.50 ಕೋಟಿ ಮಂದಿ ಬಡತನದಿಂದ ಹೊರ ಬಂದಿದ್ದಾರೆ. ಕಡು ಬಡತನ ಕಡಿಮೆಯಾಗಿದೆ ಎಂದು ಐಎಂಎಫ್ ವರದಿ ಹೇಳಿದೆ.  ಜಲಜೀವನ್ ಯೋಜನೆಯಡಿ 4 ಲಕ್ಷ ಜನರ ಜೀವ ಉಳಿದಿದೆ.   ಭಾರತದ ಯುವಕರಿಗೆ ಭ್ರಷ್ಟರಹಿತ ಆಡಳಿತ ಕೊಟ್ಟಿದ್ದೇವೆ. ದಾಖಲೆಯ ಸಂಖ್ಯೆಯಲ್ಲಿ ಸ್ಟಾರ್ಟ್ ಅಪ್ ಗಳು ಹೆಚ್ಚಾಗುತ್ತಿವೆ. ರಫ್ತಿನಲ್ಲೂ ಭಾರತ ದಾಖಲೆ ಮಾಡಿದೆ. ದೇಶದಲ್ಲಿ ಹೂಡಿಕೆ ಹೆಚ್ಚಾಗಿದೆ ರಫ್ತುಕೂಡ ಹೆಚ್ಚಾಗಿದೆ ಎಂದು ಪ್ರಧಾನಿ ನರೇಂದ್ರ  ಮೋದಿ ಹೇಳಿದರು.

Key words: We –will- win – come – power – 2024 -PM Modi