ಕಾಂಗ್ರೆಸ್ ಸೇರುವ ಕಾಲ ಇನ್ನೂ ನಿರ್ಣಯವಾಗಿಲ್ಲ- ಮಾಜಿ ಸಚಿವ ಶಿವರಾಂ ಹೆಬ್ಬಾರ್

ಉತ್ತರ ಕನ್ನಡ,ಆಗಸ್ಟ್,17,2023(www.justkannada.in):  ಕಳೆದ ಸಮ್ಮಿಶ್ರ ಸರ್ಕಾರದ ಪತನದ ವೇಳೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ 17 ಜನರ ಪೈಕಿ ಕೆಲವು ಇದೀಗ ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂಬ ಸುದ್ಧಿ ಚರ್ಚೆಯಾಗುತ್ತಿದ್ದು ಈ ಕುರಿತು ಶಾಸಕ ಶಿವರಾಂ ಹೆಬ್ಬಾರ್ ಪ್ರತಿಕ್ರಿಯಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ಮಾತನಾಡಿದ ಶಾಸಕ ಶಿವರಾಂ ಹೆಬ್ಬಾರ್,  ಕಾಂಗ್ರೆಸ್​ ಪಕ್ಷಕ್ಕೆ ಹಿಂದಿರುಗುವ ಬಗ್ಗೆ ಯಾವ ಚರ್ಚೆಯೂ ನಡೆದಿಲ್ಲ. ಕ್ಷೇತ್ರದ ಜನರನ್ನು ಬಿಟ್ಟು ನಾನು ಯಾವುದೇ ರಾಜಕಾರಣ ಮಾಡಲ್ಲ, ಒಂದು ವೇಳೆ ಸಂದರ್ಭ ಬಂದರೆ ಕ್ಷೇತ್ರದ ಜನರೊಂದಿಗೆ ಚರ್ಚಿಸುತ್ತೇನೆ.ಯಾಕೆಂದರೆ ನಮ್ಮ ಹಣೆಬರಹ ಬರೆಯುವವರು ನನ್ನ ಕ್ಷೇತ್ರದ ಜನರು. ಕಾಂಗ್ರೆಸ್ ಸೇರುವ ಕಾಲ ಇನ್ನೂ ನಿರ್ಣಯವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Key words: time – join – Congress -not been- decided -Former Minister- Shivram Hebbar