ತಮಿಳುನಾಡಿಗೆ ಕಾವೇರಿ ನೀರು: ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ಧ ಹೆಚ್.ಡಿಕೆಗೆ ತಿರುಗೇಟು ನೀಡಿದ ಸಂಸದ ಡಿ.ಕೆ ಸುರೇಶ್.

ಬೆಂಗಳೂರು, ಆಗಸ್ಟ್, 17,2023(www.justkannada.in):  ಕಾವೇರಿ ನದಿಯಿಂದ ತಮಿಳುನಾಡಿಗೆ ಹೆಚ್ಚುವರಿ ನೀರು ಬಿಡುಗಡೆ ಮಾಡುತ್ತಿರುವ ವಿಚಾರ ಕುರಿತು ಟ್ವಿಟ್ಟರ್ ನಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ಧ  ಮಾಜಿ ಮುಖ್ಯಮಂತ್ರಿ ಹೆಚ್​​​ಡಿ ಕುಮಾರಸ್ವಾಮಿಗೆ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಡಿ.ಕೆ ಸುರೇಶ್,  ಹೆಚ್.ಡಿ ಕುಮಾರಸ್ವಾಮಿಗೆ ರಾಜ್ಯದ ಜನ ವಿಶ್ರಾಂತಿ ನೀಡಿದ್ದಾರೆ. ಹೀಗಾಗಿ ಅವರಿಗೆ ಬೇರೆ ಬೇರೆ ಅಲೋಚನೆಗಳು ಬರುತ್ತಿರುತ್ತವೆ. ಕೆಲಸ ಮಾಡಿ ಅಂತ ರಾಜ್ಯದ ಜನ ಕಾಂಗ್ರೆಸ್ ​ಗೆ  ಆಶೀರ್ವಾದ  ಮಾಡಿದ್ದಾರೆ. ರಾಜ್ಯದ ಹಿತ ಕಾಪಾಡುವ ನಿಟ್ಟಿನಲ್ಲಿ ಕುಮಾರಸ್ವಾಮಿ ಸಲಹೆ ತೆಗೆದುಕೊಂಡು ಅಭಿವೃದ್ಧಿ ಮಾಡುತ್ತೇವೆ ಎಂದು ಟಾಂಗ್ ನೀಡಿದರು.

ಇನ್ನು  ನೈಸ್ ಹಗರಣದ ಕುರಿತು ದಾಖಲೆ ನೀಡಲು ಕುಮಾರಸ್ವಾಮಿ ಅವರು ಪ್ರಧಾನಿ ಮೋದಿ ಬಳಿ ಸಮಯ ಕೇಳಿರುವ ವಿಚಾರದ ಬಗ್ಗೆ  ಪ್ರತಿಕ್ರಿಯಿಸಿದ ಸಂಸದ ಡಿ.ಕೆ ಸುರೇಶ್, ಮಾಜಿ ಪ್ರಧಾನಿ ಹೆಚ್ ​​ಡಿ ದೇವೇಗೌಡರು ಸಿಎಂ ಆಗಿದ್ದ ಸಮಯದಲ್ಲಿ‌ ನೈಸ್ ರಸ್ತೆಗೆ ಯೋಜನೆಗೆ ಸಹಿ ಹಾಕಿದ್ದರು. ರಸ್ತೆಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಟ್ಟಿದ್ದು ದೇವೇಗೌಡರು. ನೈಸ್ ರಸ್ತೆ ಪರ ಹೋರಾಟ, ವಿರೋಧ ಮಾಡಿರೋದು ಕುಮಾರಸ್ವಾಮಿ. ರೈತರಿಗೆ ತೊಂದರೆ ಕೊಡುತ್ತಿರುವುದು ಕುಮಾರಸ್ವಾಮಿ. ಪ್ರಧಾನ ಮಂತ್ರಿಗಳ ಬಳಿ‌ ಧಾರಾಳವಾಗಿ ಎಲ್ಲವನ್ನೂ ಹೇಳಬಹುದು ಎಂದು ಕುಟುಕಿದರು.

Key words: kaveri -water – Tamilnadu- MP -DK Suresh – HD Kumaraswamy