ಬಾಗಲಕೋಟೆ,ಏಪ್ರಿಲ್,22,2026 (www.justkannada.in): ಲಂಚ ಸ್ವೀಕರಿಸುತ್ತಿದ್ದ ವೇಳೆ ಪೊಲೀಸ್ ಸಬ್ ಇನ್ ಸ್ಪೆಕ್ಟರ್, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಸಬ್ ಇನ್ ಸ್ಪೆಕ್ಟರ್ ಭೀಮಪ್ಪ ರಬಕವಿ, ಕಾನ್ ಸ್ಟೆಬಲ್ ಸಂತೋಷ್ ಬಿರದಾರ ಲೋಕಾಯುಕ್ತ ಬಲೆಗೆ ಬಿದ್ದವರು. ಮುತ್ತಪ್ಪ ನಾಯ್ಕರ್ ಎಂಬುವವರಿಂದ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ.
ಇಸ್ವಿಟ್ ಅಡ್ಡೆ ಮೇಲೆ ದಾಳಿ ಮಾಡಿದ ವೇಳೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಹೇಳಿ, ಹಾಗೂ ಬೈಕ್ ಬಿಡಲು ಸಬ್ ಇನ್ ಸ್ಪೆಕ್ಟರ್ ಭೀಮಪ್ಪ ರಬಕವಿ, ಕಾನ್ ಸ್ಟೆಬಲ್ ಸಂತೋಷ್ 2 ಲಕ್ಷ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ಮಧ್ಯೆ ಮುತ್ತಪ್ಪ ನಾಯ್ಕರ್ ಲೋಕಾಯುಕ್ತಕ್ಕೆ ದೂರು ನೀಡಿದ್ದು 1.70 ಲಕ್ಷ ರೂ. ಲಂಚ ಪಡೆಯುವಾಗ ಸಬ್ ಇನ್ ಸ್ಪೆಕ್ಟರ್ ಭೀಮಪ್ಪ ರಬಕವಿ, ಕಾನ್ ಸ್ಟೆಬಲ್ ಸಂತೋಷ ಲೋಕಾಯುಕ್ತಕ್ಕೆ ಸಿಕ್ಕಿ ಬಿದ್ದಿದ್ದಾರೆ.
Key words: PSI, constable, Lokayukta, trap, bribe







