Thursday, September 10, 2026

BDA Apartments

Home Front Page ಗ್ರಾಹಕರಿಗೆ ಶಾಕ್: ನಂದಿನಿ ತುಪ್ಪ, ಬೆಣ್ಣೆಯ ಬೆಲೆ ದಿಢೀರ್ ಏರಿಕೆ

ಗ್ರಾಹಕರಿಗೆ ಶಾಕ್: ನಂದಿನಿ ತುಪ್ಪ, ಬೆಣ್ಣೆಯ ಬೆಲೆ ದಿಢೀರ್ ಏರಿಕೆ

ಬೆಂಗಳೂರು,ಜುಲೈ,24,2026 (www.justkannada.in):  ರಾಜ್ಯದಲ್ಲಿ ನಂದಿನಿ ತುಪ್ಪ ಹಾಗೂ ಬೆಣ್ಣೆಯ ಬೆಲೆಯನ್ನ  ಕೆಎಂಎಫ್ ದಿಢೀರ್ ಏರಿಕೆ ಮಾಡಿದ್ದು ಈ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ.

ನಂದಿನಿ ಬ್ರ್ಯಾಂಡ್‌ ನ ದಿನನಿತ್ಯದ ಪ್ರಮುಖ ಉತ್ಪನ್ನಗಳಾದ ತುಪ್ಪ ಹಾಗೂ ಬೆಣ್ಣೆಯ ಬೆಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹೆಚ್ಚಳ ಮಾಡಿದೆ, ಪರಿಷ್ಕರಿಸಲಾದ ಹೊಸ ದರಪಟ್ಟಿಯು ಇಂದಿನಿಂದಲೇ  ರಾಜ್ಯಾದ್ಯಂತ ಇರುವ ಎಲ್ಲಾ ನಂದಿನಿ ಔಟ್‌ಲೆಟ್‌ಗಳಲ್ಲಿ ಜಾರಿಯಾಗಲಿದೆ.

ತುಪ್ಪ ಪ್ರತಿ ಕೆಜಿಗೆ  15 ರೂ. ಹಾಗೂ ಬೆಣ್ಣೆ ಪ್ರತಿ ಕೆಜಿಗೆ 50 ರೂ. ಏರಿಕೆಯಾಗಿದ್ದು, ಕ್ರಮವಾಗಿ ದರಗಳು 715 ಮತ್ತು 660 ಆಗಿವೆ. ಹಾಲು ಒಕ್ಕೂಟಗಳ ದೈನಂದಿನ ನಿರ್ವಹಣಾ ವೆಚ್ಚ, ಪ್ಯಾಕಿಂಗ್ ಸಾಮಗ್ರಿಗಳ ದರ ಹಾಗೂ ಸಾರಿಗೆ ವೆಚ್ಚಗಳು ಇತ್ತೀಚಿನ ದಿನಗಳಲ್ಲಿ ವಿಪರೀತ ಹೆಚ್ಚಾಗಿವೆ. ಹೀಗಾಗಿ ಸಂಸ್ಥೆಯ ಹಿತದೃಷ್ಟಿಯಿಂದ ಉತ್ಪನ್ನಗಳ ಬೆಲೆ ಹೆಚ್ಚಿಸುವುದು ಅನಿವಾರ್ಯವಾಯಿತು ಎಂದು ಕೆಎಂಎಫ್ ಸ್ಪಷ್ಟಪಡಿಸಿದೆ.

Key words: Shock, consumers,: Nandini, ghee, butter, price, hike