Wednesday, October 14, 2026

Dasara Wishes

Happy Dasara
Home Front Page ಎಷ್ಟು ಬೇಕಾದ್ರೂ ಪ್ರತಿಭಟನೆ ನಡೆಸಲಿ ತಲೆ ಕೆಡಿಸಿಕೊಳ್ಳಲ್ಲ: ಕಲ್ಲಡ್ಕ ಪ್ರಭಾಕರ್ ಯಾರು ಗೊತ್ತಿಲ್ಲ ಎಂದ ಮಾಜಿ...

ಎಷ್ಟು ಬೇಕಾದ್ರೂ ಪ್ರತಿಭಟನೆ ನಡೆಸಲಿ ತಲೆ ಕೆಡಿಸಿಕೊಳ್ಳಲ್ಲ: ಕಲ್ಲಡ್ಕ ಪ್ರಭಾಕರ್ ಯಾರು ಗೊತ್ತಿಲ್ಲ ಎಂದ ಮಾಜಿ ಸಚಿವ ಡಿ.ಕೆ ಶಿವಕುಮಾರ್

ಬೆಂಗಳೂರು,ಜ,13,2020(www.justkannada.in):  ಏಸುಕ್ರಿಸ್ತ ಪ್ರತಿಮೆ ನಿರ್ಮಾಣ ವಿರೋಧಿಸಿ ಬಿಜೆಪಿ ಬೃಹತ್ ರ್ಯಾಲಿ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್,  ಎಷ್ಟು ಬೇಕಾದ್ರೋ ಪ್ರತಿಭಟನೆ ಮಾಡಲಿ  ನಾನು ಅವರ ಪ್ರತಿಭಟನೆಗೆ ತಲೆ ಕೆಡಿಸಿಕೊಳ್ಳಲ್ಲ ಎಂದರು.

ಕನಕಪುರದಲ್ಲಿ ಬಿಜೆಪಿ  ಹಿಂದೂಪರ ಸಂಘಟನೆಯಿಂದ ರ್ಯಾಲಿ ಹಿನ್ನೆಲೆ ಈ ಬಗ್ಗೆ ಮಾಧ್ಯಮದಲ್ಲಿ ಮಾತನಾಡಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್, ಬಿಜೆಪಿಯವರು ಎಷ್ಟು ಬೇಕಾದ್ರೂ ಬೊಬ್ಬೆ ಹೊಡೆಯಲಿ. ನಾನು ತಲೆಕಡೆಸಿಕೊಳ್ಳಲ್ಲ. ಆರ್ ಎಸ್ ಎಸ್ ಬಿಜೆಪಿ ಪ್ರತಿಭಟನೆ ಮಾಡಲಿ.  ಕಲ್ಲಡ್ಕ ಪ್ರಭಾಕಾರ್ ಯಾರು ಅಂತಾ ಗೊತ್ತೇ ಇಲ್ಲ ಎಂದರು.

ನಾನು ಧರ್ಮದ ವಿಚಾರದಲ್ಲಿ ರಾಜಕಾರಣ ಎಂದೂ ಮಾಡಿಲ್ಲ. ಬಿಜೆಪಿ ಧರ್ಮದ ರಾಜಕಾರಣ ಮಾಡುತ್ತಿದೆ. ಮಾನವಧರ್ಮವೆ ನನಗೆ ದೊಡ್ಡದು.   ಬಿಜೆಪಿಯಿಂದ ಶಾಂತಿ ಕದಡುವ ಯತ್ನ ನಡೆದಿದೆ. ಕೆಟ್ಟ ರಾಜಕಾರಣದ ವಿರುದ್ದವಷ್ಟೇ ನಮ್ಮ ಹೋರಾಟ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

Key words: protests –jesusu statue- Former minister- DK Sivakumar – outrage-agiainst- bjp