ಮೇಯರ್ ಆಯ್ಕೆ ನನ್ನೊಬ್ಬನ‌ ತೀರ್ಮಾನವಲ್ಲ- ಶಾಸಕ ಜಿ.ಟಿ ದೇವೇಗೌಡರಿಗೆ ಸಾ.ರಾ ಮಹೇಶ್ ಟಾಂಗ್….

ಮೈಸೂರು,ಜ,13,2020(www.justkannada.in): ಮೇಯರ್ ಆಯ್ಕೆ ನನ್ನೊಬ್ಬನ‌ ತಿರ್ಮಾನವಲ್ಲ. ಇಲ್ಲಿ ಸಾರಾ ಮಹೇಶ್ ಗ್ರೂಪ್ ಇಲ್ಲ. ಹೈಕಮಾಂಡ್‌ ಹೇಳಿದಂತೆ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕ ಜಿಟಿ ದೇವೇಗೌಡರಿಗೆ ಮಾಜಿ ಸಚಿವ ಸಾ.ರಾ.ಮಹೇಶ್ ಟಾಂಗ್ ನೀಡಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ  ಜೆಡಿಎಸ್ ಶಾಸಕ ಸಾ.ರಾ ಮಹೇಶ್, ಜಿಟಿ ದೇವೇಗೌಡರನ್ನ ನಮ್ಮ‌ ನಗರಾಧ್ಯಕ್ಷರು ಕರೆದಿದ್ದಾರೆ. ಆದ್ರು ಅವರು  ಸಭೆಗೆ ಬಂದಿಲ್ಲ. ಮೇಯರ್ ಯಾರಾಗಬೇಕೆಂದು ಅವರೇ ಸೂಚಿಸಲಿ. ಅವರ ಅಭಿಪ್ರಾಯ, ಸಲಹೆ ಪಡೆದು ಮೇಯರ್ ಆಯ್ಕೆ ಮಾಡುತ್ತೇವೆ. ನಮ್ಮಲ್ಲಿ ಐದು ಜನರು ಮೇಯರ್ ಆಕಾಂಕ್ಷಿಗಳಿದ್ದಾರೆ. ಅವರ ಹಿರಿತನ, ಪಕ್ಷ ಸಂಘಟನೆ ಹಾಗೂ ವಾರ್ಡ್ ಅಭಿವೃದ್ಧಿ ಕೆಲಸ ನೋಡಿ ಮೇಯರ್ ಆಯ್ಕೆ ಮಾಡಲಾಗುತ್ತೆ. ಮೇಯರ್ ಆಯ್ಕೆ ನನ್ನೊಬ್ಬನ‌ ತಿರ್ಮಾನವಲ್ಲ. ಎಲ್ಲಾ ಪಾಲಿಕೆ ಸದಸ್ಯರ ತೀರ್ಮಾನ ಎಂದರು.

ಈ ಬಾರಿಯೂ ಕಾಂಗ್ರೆಸ್ ಜೊತೆ ಮೈತ್ರಿ ಮುಂದುವರೆಯಲಿದೆ‌. ಈಗಾಗಲೇ ಕಾಂಗ್ರೆಸ್ ನವರ ಜೊತೆ ಮಾತನಾಡಿದ್ದೇವೆ. ಇಂದು ಸಂಜೆ ಮತ್ತೊಂದು ಭಾರಿ ಕಾಂಗ್ರೆಸ್ ನಾಯಕರ ಜೊತೆ ಸಭೆ ನಡೆಸುತ್ತೇವೆ. ಬಳಿಕ ವರಿಷ್ಠರಿಗೆ ಈ ಬಗ್ಗೆ ತಿಳಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಮಾಜಿ ಸಚಿವ ಸಾರಾ ಮಹೇಶ್ ಹೇಳಿದರು.

ಏಸುಪ್ರತಿಮೆ ನಿರ್ಮಾಣ ವಿರೋಧಿಸಿ ಬಿಜೆಪಿಯಿಂದ ಕನಕಪುರ ಚಲೋ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಸಾರಾ ಮಹೇಶ್, ನಿಮ್ಮದೇ ಸರ್ಕಾರ ಇದೆ ನೀವೆ ಹೋರಾಟ ಮಾಡುತ್ತಿದ್ದೀರಿ. ನಿಮ್ಮ ಹೋರಾಟ ಯಾರ ವಿರುದ್ಧ ಎನ್ನುವುದನ್ನಾದರೂ ಹೇಳಿ. ಬಿಜೆಪಿಯವರು ದೇಶದ ತುಂಬೆಲ್ಲಾ ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡಿದ್ದಾರೆ. ಈಗ ಧರ್ಮ ರಾಜಕಾರಣ ಮುಗಿದಿದೆ, ಜಾತಿ ರಾಜಕಾರಣ ಮಾಡಲು ಹೊರಟಿದ್ದಾರೆ. ಕನಕಪುರದಲ್ಲಿ ಏಸು ಪ್ರತಿಮೆ ಮಾಡುವುದರಿಂದ ಯಾರಿಗೆ ನಷ್ಟ ಆಗುತ್ತೆ. ಎಲ್ಲಾ ವಿಚಾರವನ್ನೂ ಯಾಕೆ ವಿವಾದ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಹಾಕಿದರು.

Key words: mysore mayor-election- sa.ra Mahesh –Tong-GT Deve Gowda.