Monday, August 17, 2026

BDA Apartments

Home Front Page ಚಿನ್ನತಂಬಿ ವಿರುದ್ಧ ಅಹೋರಾತ್ರಿ ಪ್ರತಿಭಟನೆ: ಮೋಸಗಾರನಿಗೆ ಪೊಲೀಸರಿಂದಲೇ ರಕ್ಷಣೆ ಎಂದು ಆಕ್ರೋಶ

ಚಿನ್ನತಂಬಿ ವಿರುದ್ಧ ಅಹೋರಾತ್ರಿ ಪ್ರತಿಭಟನೆ: ಮೋಸಗಾರನಿಗೆ ಪೊಲೀಸರಿಂದಲೇ ರಕ್ಷಣೆ ಎಂದು ಆಕ್ರೋಶ

ಮೈಸೂರು,ಆಗಸ್ಟ್,17,2026 (www.justkannada.in): ಮೈಸೂರಿನಲ್ಲಿ ಸಾರ್ವಜನಿಕರಿಗೆ 700 ಕೆಜಿಗೂ ಅಧಿಕ ಚಿನ್ನ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನತಂಬಿ ವಿರುದ್ದ ಮೋಸ ಹೋದವರು ಅಹೋರಾತ್ರಿ ಪ್ರತಿಭಟನೆ ಮುಂದುವರೆಸಿದ್ದಾರೆ.

ಚಿನ್ನ ಕಳೆದುಕೊಂಡವರು ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣೆ ಎದುರು ಕಳೆದ ನಾಲ್ಕು ದಿನಗಳಿಂದಲೂ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮೋಸ ಹೋದವರು ಚಿನ್ನತಂಬಿ ವಿರುದ್ಧ ದೂರು ನೀಡಿ ಮನವಿ ಸಲ್ಲಿಸಿದ್ದರು.  ಇದೀಗ ಅಹೋರಾತ್ರಿ ಧರಣಿ ನಡೆಸುತ್ತಿದ್ದು,  ಗೋಲ್ಡ್ ಫ್ರಾಡ್ ಮಾಡಿದ ಚಿನ್ನತಂಬಿಯನ್ನ ಪೊಲೀಸರು ರಕ್ಷಣೆ ಮಾಡುತ್ತಿದ್ದಾರೆ.

ಚಿನ್ನತಂಬಿ 700 ಕೆಜಿಗೂ ಅಧಿಕ ಚಿನ್ನವನ್ನು ಪಡದು ವಂಚಿಸಿದ್ದಾನೆ. ಇದರಲ್ಲಿ  ಕುವೆಂಪುನಗರ ಠಾಣೆ ಪೊಲೀಸರು ಶಾಮೀಲಾಗಿದ್ದಾರೆ. ಚಿನ್ನತಂಬಿಯನ್ನು ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ರಕ್ಷಣೆ ಮಾಡುತ್ತಿದ್ದಾರೆ ಎಂದು  ಚಿನ್ನ ಕಳೆದುಕೊಡವರು ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿ ದೂರು ದಾಖಲಿಸಿದ್ದರು.

ಚಿನ್ನತಂಬಿ ವಿರುದ್ಧ 400ಕ್ಕೂ ಹೆಚ್ಚು ದೂರುಗಳು ಬಂದಿದ್ದವು. ರಾಜ್ಯ, ಅಂತರಾಜ್ಯದಲ್ಲೂ ದೂರುಗಳು ದಾಖಲಾಗಿದ್ದು, ಮೈಸೂರಿನಲ್ಲೇ 300ಕ್ಕೂ ಹೆಚ್ಚು ದೂರುಗಳು ಕೇಳಿ ಬಂದಿದ್ದವು. ಈ ಮಧ್ಯೆ ಆರೋಪಿ ಚಿನ್ನತಂಬಿ ಜೈಲಿನಿಂದ ಬಿಡುಗಡೆ ಆಗಿದ್ದು ಇತ್ತ ಚಿನ್ನತಂಬಿ ಸಂಬಂಧಿಸಿದ ಹೋಟೆಲ್ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದರು.

ಪ್ರತಿಭಟನಾಕಾರರ ಮೇಲೆಯೇ ಎಫ್ ಐ ಆರ್ ದಾಖಲಾಗಿತ್ತು. ಎಫ್‌ಐ ಆರ್ ದಾಖಲಿಸಿದ ಪೊಲೀಸರ ಕ್ರಮ ಖಂಡಿಸಿ, ಮೋಸಗಾರನಿಗೆ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ ಎಂದು  ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನಾಕಾರರು ಅಹೋರಾತ್ರಿ ಧರಣಿ ನಡೆಸಿದ್ದಾರೆ.

ನೆನ್ನೆಯಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಯತೀಂದ್ರ ಸಿದ್ದರಾಮ್ಯರಿಗೆ ಚಿನ್ನಕಳೆದುಕೊಂಡವರು ಮನವಿ ಸಲ್ಲಿಸಿದ್ದರು.

Key words: protest, against, Chinnathambi, Mysore