ಹುಣಸೂರು ಹೊಸ ಜಿಲ್ಲೆಗೆ ಪ್ರಸ್ತಾಪ ವಿಚಾರ: ಅನರ್ಹ ಶಾಸಕ ಹೆಚ್.ವಿಶ್ವನಾಥ್ ಗೆ  ಟ್ವಿಟ್ಟರ್ ನಲ್ಲಿ ರಾಜ್ಯ ಕಾಂಗ್ರೆಸ್ ತಿರುಗೇಟು…

ಬೆಂಗಳೂರು,ಅ,15,2019(www.justkannada.in):  ಮೈಸೂರು ಜಿಲ್ಲೆಯನ್ನ ವಿಭಜಿಸಿ ಹುಣಸೂರು ತಾಲ್ಲೂಕನ್ನ  ಹೊಸ ಜಿಲ್ಲೆಯನ್ನಾಗಿ ಮಾಡುವಂತೆ ಸಿಎಂ ಬಿಎಸ್ ಯಡಿಯೂರಪ್ಪಗೆ ಮನವಿ ಸಲ್ಲಿಸಿರುವ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಗೆ ರಾಜ್ಯ ಕಾಂಗ್ರೆಸ್ ಟ್ವಿಟ್ಟರ್ ಮೂಲಕ ತಿರುಗೇಟು ನೀಡಿದೆ.

ಈ ಬಗ್ಗೆ ಟ್ವಿಟ್ ಮಾಡಿರುವ ರಾಜ್ಯ ಕಾಂಗ್ರೆಸ್,ಹೆಚ್. ವಿಶ್ವನಾಥ್ ಇಷ್ಟು ವರ್ಷದ ರಾಜಕೀಯದಲ್ಲಿ ಹುಣಸೂರು ಜಿಲ್ಲೆ ಆಗಬೇಕೆಂದು  ಎಷ್ಟು ಬಾರಿ ಪ್ರಸ್ತಾಪಿಸಿದ್ದಾರೆ. ಡಿಸೆಂಬರ್ 5 ರಂದು ಉಪಚುನಾವಣೆ ಇರುವ ಹಿನ್ನೆಲೆ, ಈಗ ಹೊಸ ಜಿಲ್ಲೆಯ ಗಿಮಿಕ್ ಮಾಡಿದರೇ ಜನ ಒಪ್ಪುತ್ತಾರಾ…?ಜನರು ಇಂತಹ ರಾಜಕೀಯ ಪ್ರೇರಿತ ಅಭಿಪ್ರಾಯವನ್ನ ತಿರಸ್ಕರಿಸುತ್ತಾರೆ ಎಂದು ಹೆಚ್.ವಿಶ್ವನಾಥ್ ಗೆ ಟಾಂಗ್ ನೀಡಿದೆ.

ನಿನ್ನೆ ಸಿಎಂ ಬಿಎಸ್ ವೈ ಭೇಟಿಯಾಗಿದ್ದ ಅನರ್ಹ ಶಾಸಕ ಹೆಚ್.ವಿಶ್ವನಾಥ್,  ಮೈಸೂರು ಜಿಲ್ಲೆ ವಿಭಜಿಸಿ ಆರು ತಾಲ್ಲೂಕುಗಳನ್ನ ಸೇರಿಸಿ ಹುಣಸೂರು ಹೊಸ ಜಿಲ್ಲೆ ಮಾಡಬೇಕೆಂದು ಮನವಿ ಸಲ್ಲಿಸಿದ್ದರು. ಹೆಚ್.ವಿಶ್ವನಾಥ್ ಪ್ರಸ್ತಾಪಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ, ಮಾಜಿ ಸಚಿವ ಸಾ.ರಾ ಮಹೇಶ್ ಸೇರಿ ಹಲವರು ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದಾರೆ.

Key words: Proposals – new district – Hunsur-State Congress -Twitter -disqualified MLA -H.Vishwanath