ಜೆಸಿಬಿ ಏರಿ ಖಾಲಿ ಸೈಟ್ ಸ್ವಚ್ಛ ಮಾಡಿದ ಶಾಸಕ ಎಸ್.ಎ ರಾಮದಾಸ್…

ಮೈಸೂರು,ಅ,15,2019(www.justkannada.in): ಮೈಸೂರಿನ ಕೆ.ಆರ್ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ ರಾಮದಾಸ್ ಇಂದು ಜೆಸಿಬಿ ಏರಿ ಖಾಲಿ ಸೈಟ್ ನಲ್ಲಿ ಬೆಳಿದಿದ್ದ ಗಿಡಗಂಟೆಗಳ ಸ್ವಚ್ಛತಾಕಾರ್ಯ ಮಾಡಿದರು.

ಜೆ.ಪಿ‌.ನಗರದ ಪೊಲೀಸ್ ಬೂತ್‌ ಬಳಿ ಖಾಲಿ ಸೈಟ್‌ಗಳಲ್ಲಿ ಗಿಡಗಂಟೆಗಳ ಸ್ವಚ್ಚತೆ ಕಾರ್ಯಕ್ಕೆ ಶಾಸಕ ರಾಮದಾಸ್ ಚಾಲನೆ ನೀಡಿದರು. ಪಾಲಿಕೆಯಿಂದ 20ಸಾವಿರ ಸೈಟ್‌ಗಳ ಮಾಹಿತಿ ಸಂಗ್ರಹಿಸಲಾಗಿದ್ದು ಚದರಡಿಗೆ 2ರೂನಂತೆ ಸೈಟ್ ಮಾಲೀಕರಿಂದ ಸೆಸ್ ಸಂಗ್ರಹಿಸಲಾಗುತ್ತಿದೆ.

ಸೈಟ್ ಸ್ವಚ್ಛತೆ ಮಾಡಿದ ಬಳಿಕ ಚದರಡಿಗೆ 2ರೂ ನಂತೆ ಸೆಸ್ ಸಂಗ್ರಹಕ್ಕೆ ನಿಗದಿ ಮಾಡಿದ್ದು, ಖಾಲಿ ಸೈಟ್‌ಗಳ ಬಗ್ಗೆ ಮಾಹಿತಿ ರವಾನಿಸಲು ಶಾಸಕ ಎಸ್,ಎ ರಾಮದಾಸ್  ಸೂಚನೆ ನೀಡಿದರು. ಖಾಲಿ ಸೈಟ್‌ನಲ್ಲಿ ಬೆಳೆದಿರುವ ಗಿಡಗಂಟೆಗಳ ಫೋಟೋವನ್ನ ಮೈಸೂರು ಮಹಾನಗರ  ಪಾಲಿಕೆ ವೆಬ್‌ಸೈಟ್‌ಗೆ ಅಪ್ಲೋಡ್ ಮಾಡಬೇಕು.  ಸೈಟ್ ಸ್ವಚ್ಛತೆ ಮಾಡಿ ಸ್ವಚ್ಛವಾದ ಬಳಿಕ ಸೆಸ್ ಹಣ ನಿಗದಿ ಮಾಡಬೇಕು. ನಂತರ ನಿಗದಿ ಮಾಡಿದ ಹಣವನ್ನ ಟೆಂಡರ್‌ದಾರನಿಂದ ಸಂಗ್ರಹಿಸಬೇಕು ಎಂದು ರಾಮದಾಸ್ ತಿಳಿಸಿದರು. ಶಾಸಕರಿಗೆ ಸ್ಥಳೀಯ ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಸಾಥ್ ನೀಡಿದ್ದಾರೆ.

Key words: mysore- MLA -SA Ramadas- JCB- cleaned up -Lake vacant -site.