ಮುಕ್ತ ವಿಶ್ವವಿದ್ಯಾನಿಲಯ ಕುಲಸಚಿವ ಪ್ರೊ.ಮಹಾದೇವನ್ ರಾಜೀನಾಮೆ.

ಮೈಸೂರು,ಸೆಪ್ಟಂಬರ್, 22,2021(www.justkannada.in): ಕರ್ನಾಟಕ ರಾಜ್ಯಮುಕ್ತ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಸ್ಥಾನಕ್ಕೆ ಪ್ರೊ.ಕೆ.ಎಂ. ಮಹಾದೇವನ್ ರಾಜೀನಾಮೆ ನೀಡಿದ್ದು, ಕುಲಪತಿಗಳು ಅಂಗೀಕರಿಸಿದ್ದಾರೆ.

ಕಳೆದ 9 ತಿಂಗಳಿಂದ ಮುಕ್ತ ವಿವಿಯ ಪರೀಕ್ಷಾಂಗ ಕುಲಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರು ಕುಲಾಧಿಪತಿಗಳಾದ ರಾಜ್ಯಪಾಲರು ಹಾಗೂ ಕುಲಪತಿಗಳಿಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಪತ್ರ ಸಲ್ಲಿಸಿದ್ದರು. ಇವರ ರಾಜೀನಾಮೆಯನ್ನು ಸ್ವೀಕರಿಸಿದ ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್ ಅಂಗೀಕರಿಸಿ, ರಾಜ್ಯಪಾಲರಿಗೆ ಕಳುಹಿಸಿ ಕೊಟ್ಟಿದ್ದಾರೆ.

ಇವರು ವೈಯಕ್ತಿಕ ಕಾರಣ ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದು ಕುತೂಹಲ ಮೂಡಿಸಿದೆ. ಕುಲಸಚಿವ ಹುದ್ದೆಯ ಸೇವೆಯಿಂದ ಬಿಡುಗಡೆಗೊಂಡು ಕುವೆಂಪು ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಮುಂದುವರಿಸಲಿದ್ದಾರೆ.

Key words: Prof. Mahadevan -Resignation –KSOU- Registrar