ಭಿಕ್ಷೆ ಬೇಡುತ್ತಿದ್ದ ಬಾಲಕಿ ಮೇಲೆ ಯುವಕನಿಂದ ಅತ್ಯಾಚಾರ: ದೂರು ದಾಖಲು.

ಧಾರವಾಡ,ಸೆಪ್ಟಂಬರ್,22,2021(www.justkannada.in):  ಭಿಕ್ಷೆ ಬೇಡುತ್ತಿದ್ದ 14 ವರ್ಷದ ಬಾಲಕಿ ಮೇಲೆ  ಯುವಕನೊಬ್ಬ ಅತ್ಯಾಚಾರವೆಸಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಎಗ್ ರೈಸ್ ಹಾಗೂ ಗೋಬಿ ಮಂಚೂರಿ ತಿನ್ನಿಸುವ ಆಸೆ ತೋರಿಸಿ  ಭಿಕ್ಷೆ ಬೇಡುತ್ತಿದ್ದ ಬಾಲಕಿಯ ಮೇಲೆ ಯುವಕನೋರ್ವ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆಯೇ ಅತ್ಯಾಚಾರ ನಡೆದಿದ್ದು, ಬಾಲಕಿಯನ್ನು ಕೌನ್ಸಿಲಿಂಗ್ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

gang rape- case –impropriety-convicted - sentenced - 20 years – prison- mysore court
ಕೃಪೆ-internet

ಇದೀಗ ಮಕ್ಕಳ‌ ರಕ್ಷಣಾ ಘಟಕದಿಂದ ಬಾಲಕಿಯನ್ನು ರಕ್ಷಿಸಲಾಗಿದೆ. ಕೌನ್ಸಲಿಂಗ್ ಬಳಿಕ ದುರ್ಘಟನೆ ಬೆಳಕಿಗೆ ಬಂದ ನಂತರ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಅಧಿಕಾರಿ ಕಮಲಾ ಅವರು ದೂರು ದಾಖಲಿಸಿದ್ದು, ಆರೋಪಿಗಳನ್ನು ಪತ್ತೆ ಹಚ್ಚುವಂತೆ ಮನವಿ ಮಾಡಿದ್ದಾರೆ.

Key words: Rape –begging-girl-darawad