ಪಾಕ್ ಪರ ಘೋಷಣೆ ಪ್ರಕರಣ : ಮೂವರ ಬಂಧನ

ಬೆಂಗಳೂರು,ಮಾರ್ಚ್,4,2024(www.justkannada.in):  ವಿಧಾನಸೌಧದ ಆವರಣದಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನ ವಿಧಾನಸೌಧ ಠಾಣಾ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ದೆಹಲಿ ಮೂಲದ ಇಲ್ತಾಜ್,  ಆರ್ ಟಿನಗರದ ಮುನಾವರ್,   ಬ್ಯಾಡಗಿಯ ಮೊಹಮ್ಮದ್  ಶಫಿ ನಾಶಿಪುಡಿ ಬಂಧಿತರು ಎನ್ನಲಾಗಿದೆ. ಬಂಧಿತ ಮೂವರು ಅಂದು ರಾಜ್ಯಸಭೆ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಗೆಲುವಿನ ಸಂಭ್ರಮಾಚರಣೆ ವೇಳೆ ಪಾಕ್ ಪರ ಘೋಷಣೆ ಕೂಗಿದ್ದರು ಎನ್ನಲಾಗಿದೆ.

2ನೇ ಎಫ್ ಎಸ್ ಎಲ್ ವರದಿ ಆಧರಿಸಿ ಮೂವರನ್ನ ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್  ಗೆಲುವು ಸಾಧಿಸಿದ ಬಳಿಕ ಸಂಭ್ರಮಾಚರಣೆ ವೇಳೆ  ಪಾಕ್ ಪರ ಘೋಷಣೆ ಕೂಗಿದ ಆರೋಪ ಕೇಳಿ ಬಂದಿತ್ತು.

Key words: Pro-Pak -declaration –case- Three -arrested.