ನೀರು ಪೂರೈಕೆಗೆ ಕಂಟ್ರೋಲ್ ರೂಂ:  ನೀರಿನ ಸಮಸ್ಯೆ ಇದ್ರೆ ಕರೆ ಮಾಡಿ- ಡಿಸಿಎಂ ಡಿ.ಕೆ ಶಿವಕುಮಾರ್.

ಬೆಂಗಳೂರು, ಮಾರ್ಚ್,4,2024(www.justkannada.in): ನೀರಿನ ಸಮಸ್ಯೆ ಬಗೆಹರಿಸೋದು ಸರ್ಕಾರದ ಕರ್ತವ್ಯ. ಬಿಬಿಎಂಪಿಯಲ್ಲಿ ಕಾಲ್ ಸೆಂಟರ್ ಮಾಡುತ್ತೇವೆ.  ನೀರಿನ ಸಮಸ್ಯೆ ಇದ್ದರೇ ಕರೆ ಮಾಡಬಹುದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.

ಬೆಂಗಳೂರು‌ ನೀರಿನ  ಸಮಸ್ಯೆ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿದ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್,  ಬೆಂಗಳೂರು‌ ನೀರಿನ ಅಭಾವ ಕುರಿತು ಅಧಿಕಾರಿಗಳ ಸಭೆ ನಡೆಸಿದ್ದೇನೆ. ದಾಖಲೆಗಳ ಪ್ರಕಾರ ಬೆಂಗಳೂರಿನಲ್ಲಿ 16,791 ಬೋರ್‌ ವೆಲ್‌ಗಳಿವೆ. ಈ ಪೈಕಿ ಬೆಂಗಳೂರಿನಲ್ಲಿ 6,997 ಬೋರ್‌ವೆಲ್‌ ಡ್ರೈ ಆಗಿವೆ. ಈ ಪೈಕಿ ಒಟ್ಟು 7784 ಪ್ರಗತಿಯಲ್ಲಿದೆ ಎಂದರು.

ಬಿಬಿಎಂಪಿಯಲ್ಲಿ ಕಾಲ್ ಸೆಂಟರ್ ಮಾಡುತ್ತೇವೆ.  ಕಾಲ್ ಸೆಂಟರ್ ಮಾಡಿ ಸಮಸ್ಯೆ ಬಗೆಹರಿಸುತ್ತೇವೆ ಬಿಬಿಎಂಪಿಯಿಂದ 148 ಕೋಟಿ ರೂ. ಹಣ ಜಲಮಂಡಳಿಯಿಂದ 128 ಕೋಟಿ ರೂ. ಹಣ  ಒಟ್ಟು 556 ಕೋಟಿ ರೂ. ಅನುದಾನ ನೀಡಲಾಗುತ್ತಿದೆ.  3500 ಟ್ಯಾಂಕರ್ ಗಳಿವೆ. ಅದರಲ್ಲಿ 200 ಮಾತ್ರ ನೋಂದಣಿಯಾಗಿವೆ. ಸದ್ಯ 219 ವಾಟರ್ ಟ್ಯಾಂಕರ್ ಸದ್ಯಕ್ಕೆ ನಮ್ಮಲ್ಲಿ ರಿಜಿಸ್ಟರ್ ಆಗಿದೆ. ನೀರಿನ ಪೂರೈಕೆಗೆ ಬಿಬಿಎಂಪಿಯಲ್ಲಿ ಕಟ್ರೋಲ್ ರೂಂಗೆ ಕರೆ ಮಾಡಿದರೆ ನೀರು ಬರುತ್ತೆ. 556 ಕೋಟಿ ರೂ. ವೆಚ್ಚದಲ್ಲಿ ನಗರದಲ್ಲಿ ನೀರು ಪೂರೈಕೆ ಮಾಡಲಾಗುವುದು. ಬೋರ್ ವೆಲ್ ಕೊರೆಯಲು ಪಕ್ಕದ ತಮಿಳುನಾಡಿನಿಂದ ಮಷಿನ್ ತರಿಸಿಕೊಳ್ಳಲು ನಿರ್ಧಾರ ಮಾಡಲಾಗಿದೆ. 110 ಹಳ್ಳಿಗಳಿಗೆ ವಿಶೇಷವಾಗಿ ನೀರು ಪೂರೈಕೆ ಮಾಡಲಾಗುತ್ತೆ ಎಂದರು.

Key words: Control room -water supply- water problem – DCM- DK Shivakumar.