ಪ್ರಿಯಾಂಕ್ ಖರ್ಗೆ ಮಹಿಳಾ  ಕುಲಕ್ಕೆ ಅಪಮಾನ ಮಾಡಿದ್ಧಾರೆ: ಕ್ಷಮೆಯಾಚಿಸಲಿ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹ.

ಹುಬ್ಬಳ್ಳಿ,ಆಗಸ್ಟ್,13,2022(www.justkannada.in):  ಯುವತಿಯರು ನೌಕರಿ ಪಡೆಯಲು ಮಂಚ ಹತ್ತಬೇಕು. ಯುವಕರು ಲಂಚ ಕೊಡಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ಧ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ  ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,  ಪ್ರಿಯಾಂಕ್ ಖರ್ಗೆ ಹೇಳಿಕೆ ಕೀಳು ಅಭಿರುಚಿ ತೋರುತ್ತದೆ. ಮಹಿಳೆಯರ ವಿರುದ್ಧ ಈ ಮಾತು ಬಳಕೆಯಾಗಬಾರದು.  ಯಾವ ಮಹಿಳೆಯೂ ಈ ಹೇಳಿಕೆಯನ್ನ ಸಹಿಸಲ್ಲ.  ಪ್ರಿಯಾಂಕ್ ಖರ್ಗೆ ಮಹಿಳಾ ಕುಲಕ್ಕೆ ಅಪಮಾನ ಮಾಡಿದ್ದಾರೆ. ಹೀಗಾಗಿ ಮಹಿಳಾ ಸಮುದಾಯಕ್ಕೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಪ್ರಿಯಾಂಕ್ ಖರ್ಗೆ ಹೇಳಿಕೆ ಕಾಂಗ್ರೆಸ್ ಪಕ್ಷದ  ಹಿನಾಯ  ಸ್ಥಿತಿ ತೋರಿಸುತ್ತೆ. ಪ್ರಿಯಾಂಕ್ ಖರ್ಗೆ ಅವರ ತಂದೆ ನೋಡಿ ಕಲಿಯಬೇಕು.. ಶಕ್ತಿ ಇದ್ರೆ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಯತ್ನಿಸಲಿ  ಎಂದು ಪ್ರಹ್ಲಾದ್ ಜೋಶಿ ಹೇಳಿದರು.

Key words: Priyank Kharge- insulted- women-Union Minister-Prahlad Joshi