ಹನಿಟ್ರ್ಯಾಪ್ ಆರೋಪ: ಉದಯೋನ್ಮುಖ ನಟನ ಬಂಧನ.

ಬೆಂಗಳೂರು,ಆಗಸ್ಟ್,13,2022(www.justkannada.in):  ಉದ್ಯಮಿಯೊಬ್ಬರಿಗೆ ಹನಿಟ್ರ್ಯಾಪ್ ಮಾಡಿದ ಆರೋಪದ ಮೇಲೆ   ಉದಯೋನ್ಮುಖ ನಟನನ್ನ  ಬೆಂಗಳೂರಿನ ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜೆ.ಪಿ.ನಗರ ನಿವಾಸಿ ಯುವರಾಜ್ ಅಲಿಯಾಸ್ ಯುವ  ಬಂಧಿತ ಆರೋಪಿ. ಯುವರಾಜ್ ಮಿಸ್ಟರ್ ಅಭಿರಾಮ್ ಎಂಬ ಸಿನಿಮಾದ ನಾಯಕ ನಟ ಎನ್ನಲಾಗಿದೆ. ಉದ್ಯಮಿಯೊಬ್ಬರಿಗೆ ಹನಿಟ್ರ್ಯಾಪ್ ಮಾಡಿದ ಆರೋಪ ಯುವ ನಟ ಯುವರಾಜ್ ಮೇಲೆ ಬಂದಿದೆ.

ಇಬ್ಬರು ಯುವತಿಯರ ಹೆಸರಲ್ಲಿ ಉದ್ಯಮಿಯೊಂದಿಗೆ ಚಾಟಿಂಗ್ ಮಾಡಿದ್ದ ಯುವರಾಜ್  ಬಳಿಕ ಉದ್ಯಮಿಯನ್ನು ಭೇಟಿಯಾಗಿ  ಯುವತಿಯರಿಗೆ ಅಶ್ಲೀಲವಾಗಿ ಚಾಟ್ ಮಾಡಿದ ಬಗ್ಗೆ ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ. ಕೇಸ್ ಮುಚ್ಚಿಹಾಕಬೇಕು ಎಂದರೆ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದ. ಉದ್ಯಮಿಯಿಂದ 14 ಲಕ್ಷದವರೆಗೂ ಹಣ ವಸೂಲಿ ಮಾಡಿದ್ದಾನೆ ಎನ್ನಲಾಗಿದೆ.  ಈ ಸಂಬಂಧ ಉದ್ಯಮಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ತನಿಖೆ ನಡೆಸಿದ ಪೊಲೀಸರು ವಂಚನೆಯನ್ನ ಬಯಲಿಗೆಳೆದಿದ್ದಾರೆ.

Key words: Accused –honeytrap-actor –arrested-bangalore