ದಾಂಪತ್ಯದ ಅಂತೆ-ಕಂತೆಗಳಿಗೆ ಸ್ಪಷ್ಟನೆ ನೀಡಿದ ಪ್ರಿಯಾಮಣಿ

ಬೆಂಗಳೂರು, ಜುಲೈ 23, 2021 (www.justkannada.in): ನಟಿ ಪ್ರಿಯಾಮಣಿ ದಾಂಪತ್ಯದ ಕುರಿತು ಎದ್ದಿರುವ ಸುದ್ದಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ತನ್ನ ಮತ್ತು ಮುಸ್ತಫಾ ರಾಜ್ ಅವರ ಬಾಂಧವ್ಯ ಬಹಳ ಭದ್ರವಾಗಿದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಸಹ ನಮ್ಮ ಸಂಬಂಧ ಬಹಳ ಗಟ್ಟಿಯಾಗಿದೆ. ದಿನವೂ ನಾವು ಮಾತನಾಡುತ್ತೇವೆ. ನಮ್ಮ ದೈನಂದಿನ ಆಗುಹೋಗುಗಳನ್ನೂ ಸಾವಧಾನವಾಗಿ ಚರ್ಚಿಸುತ್ತೇವೆ ಎಂದಿದ್ದಾರೆ.

ಮುಸ್ತಫರಾಜ್ ಅವರ ಮೊದಲ ಪತ್ನಿ ಆಯಿಷಾ ಅವರು ಪ್ರಿಯಾಮಣಿ ಮತ್ತು ಮುಸ್ತಫ ಅವರ ವಿವಾಹ ಅಸಿಂಧು ಎಂದು ಪ್ರತಿಪಾದಿಸಿದ್ದಾರೆ. ಮುಸ್ತಫ ಅವರು ನನಗೆ ವಿಚ್ಛೇದನ ನೀಡಿಲ್ಲ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಪ್ರಿಯಾಮಣಿ ದಾಂಪತ್ಯದಲ್ಲಿ, ಈಗ ಬಿರುಗಾಳಿ ಎದ್ದಿದೆ. ಅಂತರ ಧರ್ಮೀಯವಾಗಿ ಮುಸ್ತಫಾರಾಜ್ ಜೊತೆಗೆ ಮದುವೆಯಾಗಿದ್ದಂತ ನಟಿ ಪ್ರಿಯಾಮಣಿ ಮದುವೆಯೇ ಕಾನೂನು ಪ್ರಕಾರ ಸಿಂಧುವಲ್ಲ ಎಂಬುದಾಗಿ ಮುಸ್ತಾಫಾ ರಾಜ್ ಮೊದಲ ಪತ್ನಿ ಆಯೀಷಾ ಸ್ಪೋಟಕ ಬಾಂಬ್ ಸಿಡಿಸಿದ್ದರು.