ಎ.ಆರ್.ರೆಹಮಾನ್ ಯಾರೆಂದು ಗೊತ್ತಿಲ್ಲ ಎಂದ ನಂದಮೂರಿ ಬಾಲಕೃಷ್ಣ ಟ್ರೋಲ್ ಮಾಡಿದ ನೆಟ್ಟಿಗರು

ಬೆಂಗಳೂರು, ಜುಲೈ 23, 2021 (www.justkannada.in): ಎ.ಆರ್.ರೆಹಮಾನ್ ಎಲ್ಲೋ ಹತ್ತು ವರ್ಷಕ್ಕೊಂದು ಹಿಟ್ ಗೀತೆಯನ್ನು ಕೊಡುತ್ತಾರೆ ಅಷ್ಟೆ ಎಂದು ಲೇವಡಿ ಮಾಡಿದ್ದಾರೆ ನಟ ನಂದಮೂರಿ ಬಾಲಕೃಷ್ಣ.

ತೆಲುಗು ಚಾನೆಲ್ ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಬಾಲಕೃಷ್ಣ ಹೇಳಿಕೆ ಸಾಕಷ್ಟು ಟೀಕೆ ಜತೆಗೆ ಟ್ರೋಲ್ ಗೂ ತುತ್ತಾಗಿದೆ.

ರೆಹಮಾನ್ ಯಾರು ಎಂಬುದೇ ನನಗೆ ಗೊತ್ತಿಲ್ಲ. ಅವರು ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆಂದು ಕೇಳಿದ್ದೇನೆ ಎಂದಿದ್ದಾರೆ. ಇಷ್ಟೇ ಅಲ್ಲ ನನಗಿನ್ನೂ ಅವರು ಯಾರೆಂದೇ ಗೊತ್ತಾಗಿಲ್ಲ. ರೆಹಮಾನ್ ಎಲ್ಲೋ ಹತ್ತು ವರ್ಷಕ್ಕೊಂದು ಹಿಟ್ ಗೀತೆಯನ್ನು ಕೊಡುತ್ತಾರೆ ಅಷ್ಟೆ ಎಂದಿದ್ದಾರೆ.

ಇನ್ನು ಎಆರ್ ರೆಹಮಾನ್ ಅಭಿಮಾನಿಗಳು ಹ್ಯಾಶ್ ಟಾಗ್ ಬಳಸಿ WhoIsBalakrishna ಎಂದು ಟ್ರೋಲ್ ಮಾಡುತ್ತಿದ್ದಾರೆ.