ಖಾಸಗಿ ಸಾರಿಗೆ ಸಂಸ್ಥೆಗಳಿಗೆ ಶಕ್ತಿಯೋಜನೆ ನಷ್ಟಪರಿಹಾರ ಕೊಡಲು ಪ್ರಾಯೋಗಿಕವಾಗಿ ಸಾಧ್ಯವಿಲ್ಲ- ಸಚಿವ ರಾಮಲಿಂಗರೆಡ್ಡಿ.

ಬೆಂಗಳೂರು,ಸೆಪ್ಟಂಬರ್,11,2023(www.justkannada.in): ಖಾಸಗಿ ಸಾರಿಗೆ ಸಂಸ್ಥೆಗಳಿಗೆ ಶಕ್ತಿಯೋಜನೆ ನಷ್ಟಪರಿಹಾರ ಕೊಡಲು ಪ್ರಾಯೋಗಿಕವಾಗಿ ಸಾಧ್ಯವಿಲ್ಲ ಎಂದು ಸಾರಿಗೆ  ಸಚಿವ ರಾಮಲಿಂಗರೆಡ್ಡಿ ಸ್ಪಷ್ಟಪಡಿಸಿದರು.

ಶಕ್ತಿಯೋಜನೆ ನಷ್ಟಪರಿಹಾರ ಸೇರಿ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಇಂದು ಖಾಸಗಿ ಸಾರಿಗೆ ಸಂಸ್ಥೆಗಳು ಮುಷ್ಕರ ಹಿನ್ನೆಲೆ ಈ ಕುರತು ಮಾತನಾಡಿದ ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಸಾರಿಗೆ ಸಂಸ್ಥೆಗಳ ಬೇಡಿಕೆ ಎಲ್ಲವೂ ಈಗಿನದ್ದಲ್ಲ. ಕಳೆದ ನಾಲ್ಕೈದು ವರ್ಷಗಳ ಹಳೆಯ ಬೇಡಿಕೆಗಳು. ಟ್ಯಾಕ್ಸ್ ಹೆಚ್ಚಳ ಮತ್ತು ಶಕ್ತಿ ಯೋಜನೆ ಮಾತ್ರ ನಮ್ಮ ಸರ್ಕಾರ ಬಂದ ಮೇಲೆ ಆಗಿರುವುದು. ಮುಖ್ಯಮಂತ್ರಿಗಳು ಸಭೆ ಕರೆದಾಗ ಖಾಸಗಿ ಸಾರಿಗೆ ಸಂಘಗಳು ಬರಲಿಲ್ಲ.  ಕಾನೂನಾತ್ಮಕವಾಗಿ ಏನು ಈಡೇರಿಸಲು ಸಾಧ್ಯ ಈಡೇರಿಸುತ್ತೇವೆ. ಸಾರಿಗೆ ಚಾಲಕರ ಪರವಾಗಿಯೇ ನಾನು ಇರುವವನು. ಶಕ್ತಿ ಯೋಜನೆಯಿಂದ ನಷ್ಟವಾಗಿದೆ.  ಪರಿಹಾರ ಕೊಡಿ ಅಂತಿದ್ದಾರೆ. ಅದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ ಎಂದರು.

ಬಜೆಟ್ ನಲ್ಲಿ ಶಕ್ತಿ ಯೋಜನೆಗೆ ಇರುವುದೇ 2500 ಕೋಟಿ ರೂ. ಸಾರಿಗೆ ಚಾಲಕರು 3 ಲಕ್ಷ ಮಂದಿ ಇದ್ದಾರೆ. ಅವರ ಬೇಡಿಕೆ ಪ್ರಕಾರ ಪರಿಹಾರ ಕೊಟ್ಟರೇ ಅದೆ 5009 ಕೋಟಿ ರೂ. ಆಗುತ್ತದೆ. ಇದನ್ನು ಈಡೇರಿಸಲು ಸಾಧ್ಯವಿಲ್ಲ ಎಂದರು.

ವಿಪಕ್ಷಗಳ ಕುಮ್ಮಕ್ಕಿನಿಂದ ಬಂದ್ ಗೆ ಕರೆ ನೀಡಲಾಗಿದೆ. ಬಿಜೆಪಿ ಅವಧಿಯಲ್ಲಿ ಸಮಸ್ಯೆ ಯಾಕೆ ಬಗೆಹರಿಸಲಿಲ್ಲ. ಆಟೋ ಸಂಘಟನೆಗಳ ಕೆಲ ಬೇಡಿಕೆಗಳಿಗೆ ಸಮ್ಮತಿ ಇದೆ ಎಂದು ರಾಮಲಿಂಗರೆಡ್ಡಿ ತಿಳಿಸಿದರು.

Key words: – private- transport protest- Minister-Ramalingareddy.