ವಿಶ್ವದ ಅತಿ ಉದ್ದದ ಗಂಗಾವಿಲಾಸ್ ಕ್ರೂಸ್ ಉದ್ಘಾಟಿಸಿದ ಪ್ರಧಾನಿ ಮೋದಿ.

ವಾರಣಾಸಿ,ಜನವರಿ,13,2023(www.justkannada.in): ವಿಶ್ವದ ಅತಿ ಉದ್ದದ ಜಲಮಾರ್ಗ ಗಂಗಾವಿಲಾಸ್ ಕ್ರೂಸ್  ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಪ್ರಧಾನಿ ಮೋದಿ ವರ್ಚುವಲ್ ಮೂಲಕ ಗಂಗಾ ವಿಲಾಸ್ ಕ್ರೂಸ್  ಉದ್ಘಾಟನೆ ಮಾಡಿದರು. ಗಂಗಾ, ಬ್ರಹ್ಮಪುತ್ರ ಸೇರಿದಂತೆ 27 ನದಿಗಳಲ್ಲಿ ‘ಗಂಗಾ ವಿಲಾಸ್’ ಕ್ರೂಸ್ ಸಂಚರಿಸಲಿದ್ದು, ಒಟ್ಟು 3,200 ಕಿಲೋಮೀಟರ್  ಸಾಗಲಿದೆ. 51 ದಿನಗಳ ಕಾಲ ಈ ಐಷಾರಾಮಿ ಹಡಗಿನಲ್ಲಿ ಪ್ರಯಾಣ ಮಾಡಬೇಕಿದ್ದು, 50 ವಿವಿಧ ಆಕರ್ಷಕ ತಾಣಗಳನ್ನು ಸಂದರ್ಶಿಸಬಹುದಾಗಿದೆ.

ಈ ಹಡಗಿನಲ್ಲಿ ಒಂದು ಬಾರಿಗೆ 36 ಪ್ರವಾಸಿಗರು ಮಾತ್ರ ಪ್ರಯಾಣಿಸಬಹುದಾಗಿದ್ದು, ಪ್ರಯಾಣಿಕರಿಗೆ 12.50 ಲಕ್ಷ ರೂಪಾಯಿ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಗಂಗಾ ವಿಲಾಸ್ ಕ್ರೂಸ್ ನಲ್ಲಿ 18 ಐಷಾರಾಮಿ ಸೂಟ್ ಗಳಿದ್ದು, ಮೂರು ಡೆಕ್ ಗಳನ್ನು ಹೊಂದಿದೆ.

ಗಂಗಾ ವಿಲಾಸ್ ಕ್ರೋಸ್ ನಿಂಧ ಪ್ರವಾಸೋದ್ಯಮ ಅಭಿವೃದ್ದಿಯಾಗಲಿದೆ . ಗಂಗಾವಿಲಾಸ್ ಕ್ರೂಸ್  ಐಷಾರಾಮಿ ಅನುಭವ ನೀಡುವ ಎಲ್ಲಾ ಸೌಕರ್ಯ ಹೊಂದಿದೆ.

Key words: Prime Minister -Modi -inaugurated –world- longest –Gangavilas- cruise.