Sunday, September 13, 2026

BDA Apartments

ಮೈಸೂರು ದಸರಾ ಮಹೋತ್ಸವ ಹಿನ್ನೆಲೆ: ಖಾಕಿ ಪಡೆಯಿಂದ ರೌಡಿಗಳಿಗೆ ಖಡಕ್ ವಾರ್ನಿಂ...
Home DASARA-2019 ಮೈಸೂರು ದಸರಾ ಮಹೋತ್ಸವ ಹಿನ್ನೆಲೆ: ಖಾಕಿ ಪಡೆಯಿಂದ ರೌಡಿಗಳಿಗೆ ಖಡಕ್ ವಾರ್ನಿಂಗ್…

ಮೈಸೂರು ದಸರಾ ಮಹೋತ್ಸವ ಹಿನ್ನೆಲೆ: ಖಾಕಿ ಪಡೆಯಿಂದ ರೌಡಿಗಳಿಗೆ ಖಡಕ್ ವಾರ್ನಿಂಗ್…

ಮೈಸೂರು,ಸೆ,19,2019(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2019 ಹಿನ್ನೆಲೆ,  ದಸರಾ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರದಂತೆ ರೌಡಿಗಳಿಗೆ ಮೈಸೂರಿನ ಪೊಲೀಸರು ಖಡಕ್ ವಾರ್ನಿಂಗ್ ಕೊಟ್ಟರು.

ಮೈಸೂರು ಪೊಲೀಸ್ ಕವಾಯತು ಮೈದಾನದಲ್ಲಿ ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ನಗರದ ರೌಡಿಶೀಟರ್ ಗಳಿಗೆ ವಾರ್ನ್ ಮಾಡಲಾಯಿತು.  ರೌಡಿಗಳಿಗೆ ಪೊಲೀಸರು ಕಾನೂನಿನ ಪಾಠ ಮಾಡಿದರು.  ದಸರಾ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬಾರದು. ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ್ರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಮೈಸೂರು ನಗರ ರೌಡಿಶೀಟರ್ ಗಳಿಗೆ ಡಿಸಿಪಿ ಮುತ್ತುರಾಜ್ ಎಚ್ಚರಿಕೆ ನೀಡಿದರು.

ಹಾಗೆಯೇ ಈಗಾಗಲೇ ಎದುರಿಸುತ್ತಿರುವ ಕೇಸ್ ಗಳ ವಿಚಾರಣೆಗೆ ಸಕಾಲಕ್ಕೆ ಕೋರ್ಟ್‌ ಗೆ ಹಾಜರಾಗಬೇಕು ಎಂದು ಡಿಸಿಪಿ ಮುತ್ತುರಾಜ್ ರೌಡಿಗಳಿಗೆ ಸೂಚಿಸಿದರು.

Key words: mysore Dasara-  Khadak Warning – police- to- Rowdysheeters