ಸರ್ಕಾರದ ಹೊಸ ಮೀಸಲಾತಿ ಬಗ್ಗೆ ಕೋರ್ಟ್ ಗೆ ಮನವರಿಕೆ ಮಾಡುತ್ತೇವೆ- ಶಾಸಕ ಸಿ.ಟಿ ರವಿ.

ಚಿಕ್ಕಮಗಳೂರು,ಜನವರಿ,13,2023(www.justkannada.in):  2ಎ ಮೀಸಲಾತಿ  ಸಂಬಂಧ ಯಥಾಸ್ಥಿತಿ ಕಾಪಾಡಿಕೊಳ್ಳವಂತೆ ಸರ್ಕಾರಕ್ಕೆ  ಹೈಕೋರ್ಟ್ ನಿರ್ದೇಶನ ನೀಡುವ ಹಿನ್ನೆಲೆ  ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಸರ್ಕಾರದ ಹೊಸ ಮೀಸಲಾತಿ ಬಗ್ಗೆ ಕೋರ್ಟ್ ಗೆ ಮನವರಿಕೆ ಮಾಡುತ್ತೇವೆ ಎಂದಿದ್ದಾರೆ.

2ಎ ಮೀಸಲಾತಿ  ನೀಡುವಂತೆ ಪಂಚಮಸಾಲಿಸಮುದಾಯ ಹೋರಾಟ ನಡೆಸುತ್ತಿರುವ ಹಿನ್ನೆಲೆ ಸರ್ಕಾರ ಎರಡು ಹೊಸ ಕ್ಯಾಟಗರಿ ಸೃಷ್ಟಿಸಿತ್ತು. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡದಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿದ್ದು ಮೀಸಲಾತಿ ಸಂಬಂಧ ಯಥಾಸ್ಥಿತಿ ಕಾಪಾಡಲು ಕೋರ್ಟ್ ಸೂಚನೆ ನೀಡಿದೆ.Politics,reason,victims,Dalits,Reservation,Don't ask,National,General,Secretary,C.T.Ravi

ಈ ಕುರಿತು ಮಾತನಾಡಿದ ಶಾಸಕ ಸಿ ಟಿ ರವಿ,  ಮೀಸಲಾತಿ ಬಗ್ಗೆ ಕೋರ್ಟ್ ಗೆ ಮನವರಿಕೆ ಮಾಡುತ್ತೇವೆ. ಯಾರಿಗೂ ಅನ್ಯಾಯವಾಗದಂತೆ ಮೀಸಲಾತಿ ನೀಡುತ್ತೇವೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುತ್ತೇವೆ ಎಂದು ಹೇಳಿದರು.

ನಿನ್ನೆ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಜಗದೀಶ್ ಶೆಟ್ಟರ್ ಕಡೆಗಣನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿ.ಟಿ ರವಿ, ಶೆಟ್ಟರ್ ಹಿರಿಯ ನಾಯಕರು.  ಶೆಟ್ಟರ್ ಕಡೆಗಣಿಸುವ ಪ್ರಶ್ನೆಯೇ ಇಲ್ಲ.  ಪಿಎಂ ಕಾರ್ಯಕ್ರಮ ದಿಲ್ಲಿಯಲ್ಲಿ ನಿಗದಿಯಾಗುವುದು ಎಂದರು.

Key words: convince – court – government- new reservation- MLA- CT Ravi