ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಸ್ಥಗಿತ

ಬೆಂಗಳೂರು,ನವೆಂಬರ್,28,2020(www.justkannada.in): ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯನ್ನು ಮುಂದಿನ ಆದೇಶವಾಗುವವರೆಗೆ ಸ್ಥಗಿತಗೊಳಿಸಲಾಗಿದ್ದು ಈ ಬಗ್ಗೆ ಸಹಕಾರ ಸಂಘಗಳ ನಿಬಂಧಕ ಆದೇಶ ಹೊರಡಿಸಿದೆ.Primary school teachers -union -election -cancel

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರ ಪಟ್ಟಿ, ಚುನಾವಣಾ ದಿನಾಂಕ, ಸ್ಥಳ, ತಾಲ್ಲೂಕು ಮಟ್ಟದ ಚುನಾವಣಾಧಿಕಾರಿಗಳ ನೇಮಕದ ಮಾಹಿತಿ ಇಲ್ಲದ ಕಾರಣ ಹಾಗೂ ಹೊಸ ತಾಲ್ಲೂಕುಗಳ ಸೃಜನೆ -ವಿಂಗಡಣೆಗೆ ಸಂಬಂಧಿಸಿದ ಗೊಂದಲದಿಂದಗಾಗಿ ಚುನಾವಣೆ ಸ್ಥಗಿತಗೊಳಿಸಲಾಗಿದೆ.Primary school teachers -union -election -cancel

Key words: Primary school teachers -union -election -cancel