ಡಿಸಿ ಶರತ್ ವರ್ಗಾವಣೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವಿಳಂಬದ ಬಗ್ಗೆ ಸಂಶಯ ವ್ಯಕ್ತಪಡಿಸಿದ ಶಾಸಕ ಸಾ.ರಾ ಮಹೇಶ್…

ಮೈಸೂರು,ನವೆಂಬರ್,28,2020(www.justkannada.in):  ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ನೇಮಕ ಮತ್ತು ನಿರ್ಗಮಿತ ಡಿಸಿ ಶರತ್ ಅವರು ತಮ್ಮ ವರ್ಗಾವಣೆಯನ್ನ ಪ್ರಶ್ನಿಸಿ ಸಿಎಟಿಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವಿಳಂಬದ ಬಗ್ಗೆ ಶಾಸಕ ಸಾ.ರಾ ಮಹೇಶ್ ಸಂಶಯ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಸಾ.ರಾ ಮಹೇಶ್,  ರೋಹಿಣಿ ಸಿಂಧೂರಿ ಪರವಾದ ವಿಚಾರದಲ್ಲಿ ಕೇವಲ ಅರ್ಧ ದಿನದಲ್ಲಿ ತೀರ್ಪು ಹೊರ ಬರುತ್ತದೆ. ಆದರೆ ಅವರ ನೇಮಕ ಪ್ರಶ್ನಿಸಿ ನಡೆಯುತ್ತಿರುವ ಸಿಎಟಿ ವಿಚಾರಣೆಯೇ ಪದೇ ಪದೇ ಮುಂದಕ್ಕೆ ಹೋಗುತ್ತಿದೆ. ಇದು ಅನುಮಾನ ಮೂಡಿಸುತ್ತಿದೆ ಎಂದು ಹೇಳಿದ್ದಾರೆ. ಈ ಮೂಲಕ ಸಿಎಟಿ ವಿಚಾರಣೆಯ ಕಾರ್ಯ ಕಲಾಪಗಳ ಕುರಿತು ಸಾ.ರಾ.ಮಹೇಶ್ ಅನುಮಾನ ವ್ಯಕ್ತಪಡಿಸಿದ್ದಾರೆ.mla-sara-mahesh-expressed-delay-hearing-petition-filed-dc-sarath-transfer

Key words: MLA  -SARA  Mahesh –expressed- delay -hearing – petition- filed – DC –Sarath-transfer