ರಾಜ್ಯ ಸರ್ಕಾರದಿಂದ ‘ಕನ್ನಡ ಕಾಯಕ ವರ್ಷಾಚರಣೆಗೆ ಆದೇಶ…

ಬೆಂಗಳೂರು, ನವೆಂಬರ್,28,2020(www.justkannada.in): ರಾಜ್ಯದಲ್ಲಿ ಆಡಳಿತಭಾಷೆಯನ್ನಾಗಿ ಕನ್ನಡವನ್ನು ಅನುಷ್ಠಾನಕ್ಕೆ ತರಲು ಮುಂದಾದ ಸರಕಾರ ಮುಂದಿನ ಒಂದು ವರ್ಷಗಳ ತನಕ ” ಕನ್ನಡ ಕಾಯಕ ವರ್ಷ” ಘೋಷಿಸಿದೆ.

ಕನ್ನಡ ಬಳಕೆ ಕುರಿತು ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕನ್ನಡ ಕಾಯಕ ವರ್ಷಾಚರಣೆಯನ್ನು ಇಡೀ ವರ್ಷ ಆಚರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೊರೊನಾ ಆತಂಕದಲ್ಲಿರುವ ಕರ್ನಾಟಕದ ಎಲ್ಲಾ ವಲಯಗಳಲ್ಲಿ ಜೀವನೋತ್ಸಾಹ ತುಂಬುವ ಮೂಲಕ ಭವಿಷ್ಯದ ಕನ್ನಡವನ್ನು ಕಟ್ಟುವ ದೃಷ್ಟಿಯಿಂದ ಕನ್ನಡ, ಕಾಯಕ ವರ್ಷಾಚರಣೆಯನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಇಂದಿನಿಂದ ಒಂದು ವರ್ಷ ಕನ್ನಡ ಕಾಯಕ ವರ್ಷಾಚರಣೆಗೆ ಆದೇಶಿಸಲಾಗಿದೆ.

ಡಿಸೆಂಬರ್ 5 ರಂದು ಕನ್ನಡ ಪರ ಸಂಘಟನೆಗಳಿಂದ ಬಂದ್ಗೆ ಕರೆ ಹಿನ್ನೆಲೆ. ಕನ್ನಡ-ಪರ ಪ್ರೇಮ ತೋರಿಸಲು ಮುಂದಾದ ರಾಜ್ಯ ಸರ್ಕಾರ‌. ಒಂದು ವರ್ಷ ಕನ್ನಡ ಕಾಯಕ ವರ್ಷಾಚರಣೆ ನಡೆಸಲು ಸುತ್ತೋಲೆ ಹೊರಡಿಸಿದೆ. ಇನ್ಮುಂದೆ ಸರ್ಕಾರಿ ಆದೇಶದ ಸುತ್ತೋಲೆ ಕನ್ನಡದಲ್ಲಿ ಹೊರಡಿಸುವುದು. ತಂತ್ರಜ್ಞಾನದಲ್ಲೂ ಕನ್ನಡ ಕಡ್ಡಾಯ ಬಳಕೆಗೆ ಸಹಾಯವಾಗುವಂತೆ ತಂತ್ರಾಂಶ ಅಭಿವೃದ್ಧಿ. ಇಲಾಖಾವಾರು ನೀತಿ, ಕರಡು ಪ್ರತಿಗಳು ಕನ್ನಡದಲ್ಲಿರಬೇಕು.order-kannada-kayaka-varsha-state-government

ಫಲಾನುಭವಿಗಳಿಗೆ ಕಳಿಸುವ ಸಂದೇಶಗಳು ಕನ್ನಡದಲ್ಲಿರಬೇಕು. ನಗರ, ಪಟ್ಟಣಗಳ ಹೆಸರನ್ನು ಕನ್ನಡ ಭಾಷೆಯ ಉಚ್ಚಾರಣೆಯಂತೆಯೇ ಬಳಸುವುದು. ಕಾರ್ಯಕ್ರಮಗಳಲ್ಲಿ ಕನ್ನಡ ಕಲಾವಿದರಿಗೆ ಆದ್ಯತೆ ನೀಡುವುದು. ಕನ್ನಡ ಭಾಷೆ, ನೆಲ, ಜಲ ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮ ಮೊದಲಾದವುಗಳಲ್ಲಿ ಕೇವಲ ಕನ್ನಡ ಭಾಷೆ ಮಾತ್ರ ಬಳಕೆಗೆ ಸೂಚನೆ ನೀಡಲಾಗಿದೆ. ಎಲ್ಲಾ ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಸಾರ್ವಜನಿಕರಿಗೆ ನೀಡುವ ದಾಖಲೆ ಮತ್ತು ಸೇವೆಯಲ್ಲಿ ಕನ್ನಡ ಕಡ್ಡಾಯಗೊಳಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

English summary….

State Government orders to celebrate Kannada Kaayaka Varsha
Bengaluru, Nov. 28, 2020 (www.justkannada.in): The State Government which has stepped forward in making Kannada as the administrative language of the state has announced the next one year as the ‘Kannada Kaayaka Varsha’.
The State government has issued orders to observe the next whole year as Kannada year, with a view of protecting and developing Kannada language. The orders have been issued following the call for a state-wide bundh by pro-Kannada organisations of the state. It appears that the State government is attempting to exhibit it’s love towards Kannada language and hence has stated that all the government circulars should be in Kannada and also given instructions to develop computer applications in Kannada language, apart from preparing all the department policies and other drafts in Kannada.order-kannada-kayaka-varsha-state-government
Keywords: Kannada Kaayaka Varsha/ State Government/ Kannada year

Key words: Order – Kannada kayaka varsha-state government