ಮೂಗಿನ ಮೂಲಕ ಹಾಕುವ ಭಾರತ್ ಬಯೋಟೆಕ್ ನ ನೇಸಲ್ ವ್ಯಾಕ್ಸಿನ್ ಗೆ ದರ ನಿಗದಿ.

ಬೆಂಗಳೂರು,ಡಿಸೆಂಬರ್,27,2022(www.justkannada.in): ರಾಜ್ಯದಲ್ಲಿ  ಕೋವಿಡ್ ಭೀತಿ ಹಿನ್ನೆಲೆ  ಬೂಸ್ಟರ್ ಡೋಸ್ ಲಸಿಕೆ ಪಡೆಯುವಂತೆ ಸರ್ಕಾರ ಜನರಲ್ಲಿ ಮನವಿ ಮಾಡುತ್ತಿದ್ದು, ಈ ನಡುವೆ ಮೂಗಿನ ಮೂಲಕ ಹಾಕುವ ಭಾರತ್ ಬಯೋಟೆಕ್ ನ ನೇಸಲ್ ವ್ಯಾಕ್ಸಿನ್ ಗೆ ದರ ನಿಗದಿ ಮಾಡಲಾಗಿದೆ.

ಮಾರುಕಟ್ಟೆಯಲ್ಲಿ ಪ್ರತಿಡೋಸ್  ಗೆ 800 ರೂ. ಸರ್ಕಾರಿ ಆಸ್ಪತ್ರೆಗಳಲ್ಲಿ 325 ರೂವನ್ನು ನೇಸಲ್ ಲಸಿಕೆಗೆ ದರ ನಿಗದಿ ಮಾಡಲಾಗಿದೆ.   18 ವರ್ಷ ಮೇಲ್ಪಟ್ಟವರು ಬೂಸ್ಟರ್ ಡೋಸ್ ಆಗಿ ಇದನ್ನು ಬಳಸಬಹುದು. ಜನವರಿ 4ನೇ ವಾರದಲ್ಲಿ ಮಾರುಕಟ್ಟೆಯಲ್ಲಿ ನೇಸಲ್ ವ್ಯಾಕ್ಸಿನ್ ಲಭ್ಯವಿರಲಿದೆ.

ಭಾರತ ಸರ್ಕಾರವು ಮೂಗಿನ ಮೂಲಕ ಹಾಕುವ ಲಸಿಕೆಯನ್ನು ಅನುಮೋದಿಸಿದೆ. ಇದನ್ನು ಹೆಟೆರೊಲಾಜಸ್ ಬೂಸ್ಟರ್ ಆಗಿ ಬಳಸಲಾಗುವುದು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮೊದಲು ಲಭ್ಯವಿರುತ್ತದೆ. ಇದನ್ನು ಕೋವಿಡ್ ಲಸಿಕೆ ಕಾರ್ಯಕ್ರಮದಲ್ಲಿ ಸೇರಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.

Key words: Price – Bharat Biotech- nasal -vaccine.