ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಮಾಜಿ ಸಿಎಂ ಸಿದ್ಧರಾಮಯ್ಯಗೆ ಒತ್ತಡ.

ಬೆಂಗಳೂರು,ಫೆಬ್ರವರಿ,14,2023(www.justkannada.in):  ಕೋಲಾರದಿಂದ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಣೆ ಮಾಡಿರುವ ಮಾಜಿ ಸಿಎಂ ಸಿದ‍್ಧರಾಮಯ್ಯಗೆ ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಒತ್ತಡ ಬಂದಿದೆ.

ಬಾದಾಮಿ ಕ್ಷೇತ್ರದ ಬೆಂಬಲಿಗರು ಅಭಿಮಾನಿಗಳು ಬೆಂಗಳೂರಿನ ಸಿದ‍್ಧರಾಮಯ್ಯ ನಿವಾಸಕ್ಕೆ ಆಗಮಿಸಿ ಒತ್ತಡ ಹಾಕಿದ್ದಾರೆ. ಬಾದಾಮಿಯಿಂದಲೇ ಈ ಬಾರಿಯೂ ಸ್ಪರ್ಧಿಸಬೇಕು. ಸ್ಪರ್ಧೇ ಮಾಡದಿದ್ದರೇ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು   ಗ್ರಾಮಪಂಚಾಯತಿ, ಪಟ್ಟಣ ಪಂಚಾಯಿತಿ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದು ಖಚಿತವಾಗುತ್ತಿದ್ದಂತೆಯೇ ವರುಣಾ, ಚಾಮುಂಡೇಶ್ವರಿ ಕ್ಷೇತ್ರಗಳ ತಮ್ಮ ಬೆಂಬಲಿಗರು  ತಮ್ಮ ಕ್ಷೇತ್ರಗಳಲ್ಲೇ ಸ್ಪರ್ಧಿಸಲಿ ಎಂದು ಸಿದ್ಧರಾಮಯ್ಯಗೆ ಒತ್ತಡ ಹಾಕುತ್ತಿದ್ದು ಅಧಿಕೃತ ನಿವಾಸಕ್ಕೆ ಪದೇಪದೆ ಭೇಟಿ ನೀಡುತ್ತಿದ್ದಾರೆ.

Key words: Pressure -former CM- Siddaramaiah – contest -Badami