ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮೈಸೂರು ಜಿಲ್ಲಾ ಪತ್ರಕರ್ತರಿಗೆ ಅಭಿನಂದನೆ.

ಮೈಸೂರು,ಫೆಬ್ರವರಿ,14,2023(www.justkannada.in): ಮೈಸೂರಿನ  ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕ ಮಾಧ್ಯಮ ಅಕಾಡೆಮಿ ಕೊಡ ಮಾಡುವ 2019, 2020, 2021, 2022ನೇ ಸಾಲಿನ ವಿವಿಧ ವಿಭಾಗಗಳ ಪ್ರಶಸ್ತಿಗೆ ಭಾಜನರಾಗಿರುವ ಜಿಲ್ಲೆಯ ಪತ್ರಕರ್ತರಿಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಇಂದು  ಸಂಘದ ಸಭಾಂಗಣದಲ್ಲಿ ಅಭಿನಂದನಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಂಸದ ಪ್ರತಾಪ್ ಸಿಂಹ ಭಾಗವಹಿಸಿದ್ದರು.

ವಿವಿಧ ಸಾಲಿನಲ್ಲಿ ಪ್ರಶಸ್ತಿಗೆ ಭಾಜನರಾಗಿರುವ ಮೈಸೂರು ಮಿತ್ರ ಪತ್ರಿಕೆ ಸಂಪಾದಕ ಎಂ.ಗೋವಿಂದೇಗೌಡ, ವಿಜಯವಾಣಿ ಪತ್ರಿಕೆ ಹಿರಿಯ ಉಪಸಂಪಾದಕ ಮುಳ್ಳೂರು ರಾಜು, ದಿ ಹಿಂದೂ ಪತ್ರಿಕೆಯ ಹಿರಿಯ ವರದಿಗಾರ ಶಂಕರ್ ಬೆನ್ನೂರು, ವಿಜಯ ಕರ್ನಾಟಕದ ಹಿರಿಯ ಛಾಯಾಗ್ರಾಹಕ ನಾಗೇಶ್ ಪಾಣತ್ತಲೆ, ಪಬ್ಲಿಕ್ ಟಿವಿಯ ಹಿರಿಯ ವರದಿಗಾರ ಕೆ.ಪಿ.ನಾಗರಾಜ್, ಆಂದೋಲನ ಪತ್ರಿಕೆಯ ಹಿರಿಯ ವರದಿಗಾರ ಕೆ.ಬಿ.ರಮೇಶ್ ನಾಯಕ, ಹಿರಿಯ ಉಪಸಂಪಾದಕ ಮುಳ್ಳೂರು ಶಿವಪ್ರಸಾದ್, ಹುಣಸೂರು ತಾಲೂಕು ವಿಜಯವಾಣಿ ವರದಿಗಾರ  ಶಿವಕುಮಾರ್ ರಾವ್, ವಿಶ್ವವಾಣಿಯ ವಿಶೇಷ ವರದಿಗಾರ ನಂಜನಗೂಡು ಮೋಹನ್, ಉದಯವಾಣಿಯ ಗ್ರಾಮೀಣ ಸುದ್ದಿ ವಿಭಾಗದ ಮುಖ್ಯಸ್ಥ ಅ.ಮ.ಸುರೇಶ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮೈಸೂರು ದಿಗಂತ ಪತ್ರಿಕೆ ಸಂಪಾದಕ ಮಳಲಿ ನಟರಾಜ್ ಕುಮಾರ್, ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಯ ಹಿರಿಯ ವರದಿಗಾರ ಕೆ.ಶಿವಕುಮಾರ್, ಮಾಧ್ಯಮ ಅಕಾಡೆಮಿ ಸದಸ್ಯರಾದ ಸಿ.ಕೆ.ಮಹೇಂದ್ರ, ಕೂಡ್ಲಿ ಗುರುರಾಜ್ ಸೇರಿದಂತೆ  ಸಂಘದ ಅಧ್ಯಕ್ಷ ಎಸ್.ಟಿ. ರವಿಕುಮಾರ್ ಕಾರ್ಯದರ್ಶಿ ಸುಬ್ರಮಣ್ಯ ಮುಂತಾದವರು ಉಪಸ್ಥಿತರಿದ್ದರು.

Key words: Congratulations -program – Mysore -District -Journalist – Media Academy Award.