ಮೈಸೂರಿನಲ್ಲಿ ಕೊರಗಜ್ಜ ದೈವದ ಹೆಸರಲ್ಲಿ ದಂಧೆ: ಹಣಕ್ಕಾಗಿ ಅರ್ಚಕ  ಮತ್ತು ಟ್ರಸ್ಟ್ ಅಧ್ಯಕ್ಷನ ನಡುವೆ ಕಿತ್ತಾಟ.

ಮೈಸೂರು,ಫೆಬ್ರವರಿ,14,2023(www.justkannada.in):  ಮೈಸೂರಿನಲ್ಲಿ ಕೊರಗಜ್ಜ ದೈವದ ಹೆಸರಲ್ಲಿ ದಂಧೆ ನಡೆಯುತ್ತಿದ್ದು, ಈ ನಡುವ ದೇವಸ್ಥಾನದಿಂದ ಬರುವ ಹಣ ಹಂಚಿಕೊಳ್ಳುವಾಗ ಅರ್ಚಕ ಮತ್ತು  ಟ್ರಸ್ಟ್ ಅಧ್ಯಕ್ಷನ ನಡುವೆ ಕಿತ್ತಾಟ ನಡೆದಿದೆ.

ಆರ್.ಟಿ.ನಗರದಲ್ಲಿ ಮಂಗಳೂರು ದೈವಗಳು ತಲೆ ಎತ್ತಿವೆ. ಕೊರಗಜ್ಜ ದೈವದ ಹೆಸರಲ್ಲಿ ದಂಧೆ ನಡೆಯುತ್ತಿದ್ದು ಲಕ್ಷಾಂತರ ರೂ. ಹಣ ಕೊರಗಜ್ಜನ ದೇವಸ್ಥಾನಕ್ಕೆ ಹರಿದು ಬರುತ್ತಿದ್ದು, ಹಣ ಹಂಚಿಕೊಳ್ಳಲು ದೇವಸ್ಥಾನದ ಅರ್ಚಕ ತೇಜುಕುಮಾರ್  ಹಾಗೂ ಟ್ರಸ್ಟ್ ಅಧ್ಯಕ್ಷ ಬಂಗಾರಪ್ಪ ನಡುವೆ ಕಿತ್ತಾಟ ನಡೆದಿದೆ. ಈ ವೇಳೆ ಬೇಸತ್ತ ಅರ್ಚಕನ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದು, ಮೈಸೂರಿನ ಅರವಿಂದನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ದೇವಸ್ಥಾನಕ್ಕೆ ಲಕ್ಷಾಂತರ ರೂ ಹಣ ಬರ್ತಿದ್ದ ಕಾರಣ ಅರ್ಚಕ ತೇಜುಕುಮಾರ್ ಗೆ ಟ್ರಸ್ಟ್ ಅಧ್ಯಕ್ಷ ಬಂಗಾರಪ್ಪ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪ ಕೇಳಿ ಬಂದಿದೆ.

ಯೂಟ್ಯೂಬ್ ಚಾನೆಲ್ ಗಳ ಹೆಸರಲ್ಲಿ ಮೊದಲಿನಿಂದಲೂ ಬ್ಲಾಕ್ ಮೇಲ್ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಬ್ಲಾಕ್‌ ಮೇಲ್ ನಿಂದ ತಪ್ಪಿಸಿಕೊಳ್ಳಲು ಟ್ರಸ್ಟ್ ನಿರ್ಮಾಣ ಮಾಡಲಾಗಿತ್ತು. ಆದರೆ ಇದೀಗ ಟ್ರಸ್ಟ್ ಸದಸ್ಯರಲ್ಲಿಯೇ ಹಣಕ್ಕಾಗಿ ಕಿತ್ತಾಟ ನಡೆಯುತ್ತಿದೆ.

ಇನ್ನು ದೇವಸ್ಥಾನಕ್ಕೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿರುವುದನ್ನ ಗಮನಿಸಿ ಪಕ್ಕದಲ್ಲಿ ಮತ್ತೊಂದು ದೇವಸ್ಥಾನ ತಲೆ ಎತ್ತಿದ್ದು, ರಾಜ ದೈವ ಗುಳಿಗ ಹೆಸರಿನಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ.  ದೇವಸ್ಥಾನದ ಹುಂಡಿಯನ್ನು ಅರ್ಚಕ ಮನೆಗೆ ತೆಗೆದುಕೊಂಡು‌ ಹೋಗಿದ್ದು,  ಜಯಪುರ ಠಾಣೆಯಲ್ಲಿ ಮೌಖಿಕ ದೂರಿನನ್ವಯ ತನಿಖೆ ನಡೆಸಲಾಗುತ್ತಿದೆ.

Key words: Koragajja temple-mysore-fight -between -priest – trust president