ನವದೆಹಲಿ,ನವೆಂಬರ್,14,2020(www.justkannada.in): ಕೊರೋನಾ ನಡುವೆ ದೀಪಾವಳಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಎಲ್ಲೆಡೆ ಹಬ್ಬದ ವ್ಯಾಪಾರ ಜೋರಾಗಿದೆ. ಈ ಮಧ್ಯೆ ದೇಶದ ಜನತೆಗೆ ರಾಷ್ಟ್ರಪತಿ ರಮನಾಥ್ ಕೋವಿಂದ್ ದೀಪಾವಳಿ ಹಬ್ಬದ ಶುಭಕೋರಿದ್ದಾರೆ.
ಟ್ವೀಟ್ ಮೂಲಕ ಶುಭಕೋರಿರುವ ರಾಷ್ಟ್ರಪತಿ ರಮನಾಥ್ ಕೋವಿಂದ್, ಮಾಲಿನ್ಯ ಮುಕ್ತ ಪರಿಸರ ಸ್ನೇಹಿ ದೀಪಾವಳಿ ಆಚರಿಸಿ. ಪ್ರಕೃತಿಯನ್ನ ಗೌರವಿಸುವಂತೆ ದೀಪಾವಳಿ ಹಬ್ಬ ಆಚರಿಸಿ.ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯ ಎಂದು ಶುಭ ಕೋರಿದ್ದಾರೆ.
ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಸಹ ಟ್ವೀಟ್ ಮಾಡಿ ಶುಭಕೋರಿದ್ದು, ಈ ದೀಪಾವಳಿ ಎಲ್ಲರಿಗೂ ಉತ್ತಮ ಭವಿಷ್ಯ ಸಂತೋಷ ನೀಡಲಿ ಎಂದು ಹಾರೈಸಿದ್ದಾರೆ.
Key words: President -Ramanath Kovind –wishing- Diwali -tweet.






