ಫಿಸಿಯೋಥೆರಪಿಸ್ಟ್ ಜೊತೆ ಸಪ್ತಪದಿ ತುಳಿದ ಪ್ರಭುದೇವ !?

ಬೆಂಗಳೂರು, ನವೆಂಬರ್ 20, 2020 (www.justkannada.in): ನಟ, ನಿರ್ದೇಶಕ ಪ್ರಭುದೇವ ಬಿಹಾರ ಮೂಲದ ವೈದ್ಯೆಯನ್ನು ಗೌಪ್ಯವಾಗಿ ಮದುವೆ ಆಗಿದ್ದಾರೆಯೇ?

ಇಂತಹದೊಂದು ಸುದ್ದಿ ಹರಿದಾಡುತ್ತಿದೆ. ಬಿಹಾರ ಮೂಲದ ಪಿಸಿಯೊಥೆರಪಿಸ್ಟ್ ವೈದ್ಯೆ ಜತೆ ಪ್ರಭುದೇವ ಸಪ್ತಪದಿ ತುಳಿದಿದ್ದಾರೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮುಂಬೈನ ತಮ್ಮ ನಿವಾಸದಲ್ಲಿ ಪ್ರಭುದೇವ ರಹಸ್ಯವಾಗಿ ಮದುವೆ ಆಗಿದ್ದು, ದಂಪತಿ ಚೆನ್ನೈನಲ್ಲಿ ಜೊತೆಯಾಗಿ ವಾಸವಾಗಿದ್ದಾರೆ ಎನ್ನಲಾಗಿದೆ.

ಬೆನ್ನು ನೋವಿಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾಗ ಫಿಜಿಯೋಥೆರಪಿಸ್ಟ್ ಅವರ ಪರಿಚಯ ಆಗಿದ್ದು, ಚಿಕಿತ್ಸೆ ನಂತರ ಕೆಲವು ಸಮಯ ಇಬ್ಬರೂ ಡೇಟಿಂಗ್ ಮಾಡಿದ್ದು, ನಂತರ ಗೌಪ್ಯವಾಗಿ ವಿವಾಹವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.