ಶೀತಲ್ ಶೆಟ್ಟಿ ‘ವಿಂಡೋಸೀಟ್’ಗೆ ಫುಲ್ ಡಿಮ್ಯಾಂಡ್ !

ಬೆಂಗಳೂರು, ನವೆಂಬರ್ 20, 2020 (www.justkannada.in): ವಿಂಡೋಸೀಟ್ ಚಿತ್ರದ ಟೀಸರ್’ಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಇದನ್ನು ಕಂಡು ಚಿತ್ರದ ನಿರ್ದೇಶಕಿ ಶೀತಲ್ ಶೆಟ್ಟಿ ಫುಲ್ ಖುಷಿಯಾಗಿದ್ದಾರೆ.

ಇಲ್ಲಿವರೆಗೆ ಬರೋಬ್ಬರಿ ಎಂಟು ಲಕ್ಷ ಮಂದಿ ವಿಂಡೋಸೀಟ್ ಟೀಸರ್ ನೋಡಿದ್ದಾರೆ. ಜತೆಗೆ ಚಿತ್ರದ ಪೋಸ್ಟರ್’ಗೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ನಿರೂಪ್ ಭಂಡಾರಿ ಈ ಚಿತ್ರದ ನಾಯಕ ನಟನಾಗಿ ನಟಿಸಿದ್ದು ಸಂಜನಾ ಆನಂದ್, ಅಮೃತಾ ಅಯ್ಯಂಗಾರ್ ಚಿತ್ರದ ನಾಯಕಿಯರಾಗಿ ವಿಂಡೋಸೀಟ್ ಚಿತ್ರದಲ್ಲಿ ಕಾಣಸಿಗಲಿದ್ದಾರೆ.

ಮಧುಸೂದನ್ ರಾವ್, ಲೇಖಾ ನಾಯ್ಡು, ಸೂರಜ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಜಾಕ್ ಮಂಜು ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವಿಘ್ನೇಶ್ ರಾಜ್ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಸದ್ಯದಲ್ಲೇ ಬಿಡುಗಡೆ ಬಗ್ಗೆಯೂ ಚಿತ್ರತಂಡ ಮಾಹಿತಿ ನೀಡಲಿದೆ.