ಹಳೆ ದಾಖಲೆಗಳನ್ನು ‘ಬ್ಲಾಸ್ಟ್’ ಮಾಡಿದ ದಳಪತಿ ವಿಜಯ್ ‘ಮಾಸ್ಟರ್’ ಟೀಸರ್ !

ಬೆಂಗಳೂರು, ನವೆಂಬರ್ 20, 2020 (www.justkannada.in): ತಮಿಳು ದಳಪತಿ ವಿಜಯ್ ಅವರ ಹೊಸ ಚಿತ್ರದ ಟೀಸರ್ ದಾಖಲೆ ಬರೆದಿದೆ.

ಹೌದು. ದೀಪಾವಳಿಗೆ ವಿಶೇಷವಾಗಿ ಬಿಡುಗಡೆಯಾದ ಮಾಸ್ಟರ್ ಚಿತ್ರದ ಟೀಸರ್ ವಿಶ್ವದಾದ್ಯಂತ ಹೊಸ ದಾಖಲೆಯನ್ನು ನಿರ್ಮಿಸಿದೆ.

ಮಾಸ್ಟರ್ ಮೂವಿ ಟೀಸರ್ 2 ಮಿಲಿಯನ್ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಆ ಮೂಲಕ ಇದು ದಾಖಲೆ ಸೃಷ್ಟಿಸಿದ ಮೊದಲ ಟೀಸರ್ ಆಗಿದೆ.

ವಿಜಯ್ ಅವರ ಅಭಿಮಾನಿಗಳು ಮಾಸ್ಟರ್ ಚಿತ್ರಕ್ಕಾಗಿ ತಿಂಗಳುಗಳಿಂದ ಕಾಯುತ್ತಿದ್ದರು. ಇದೀಗ ನವೆಂಬರ್ 14 ರಂದು ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ.