ಪವರ್ ಟಿವಿ ಚಾನಲ್ ಲೈವ್ ಬಂದ್  ವಿಚಾರ: ಟ್ವೀಟ್ ಮೂಲಕ ಸಿಎಂ ಬಿಎಸ್ ವೈ ವಿರುದ್ಧ ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿ…

ಬೆಂಗಳೂರು,ಸೆಪ್ಟಂಬರ್,30,2020(www.justkannada.in): ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಕುರಿತು ಭ್ರಷ್ಟಾಚಾರ ಸುದ್ದಿ ಪ್ರಸಾರ ಮಾಡಿ ರಾಜ್ಯದ ಗಮನ ಸೆಳೆದಿದ್ದ ಕನ್ನಡದ ಸುದ್ದಿ ಮಾಧ್ಯಮ “ಪವರ್‌ ಟಿವಿ ಲೈವ್ ಬಂದ್ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ನಡೆ ವಿರುದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.

ಈ ಕುರಿತು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ತನ್ನ ಮಗನ ಭ್ರಷ್ಟಾಚಾರದ ವರದಿ ಪ್ರಸಾರ ಮಾಡಿದ ಕಾರಣಕ್ಕೆ ಸಿಎಂ ಅವರು ಅಧಿಕಾರದ ದುರುಪಯೋಗದ ಮೂಲಕ ಪವರ್ ಟಿವಿ ಚಾನಲ್ ಅನ್ನೇ ಬಂದ್ ಮಾಡಲು ಹೊರಟಿರುವುದು ಖಂಡನೀಯ.

ಮಾಧ್ಯಮದ ದಮನದ  ಅತಿರೇಕದ ಈ ಕ್ರಮದಿಂದಾಗಿ ಟಿವಿ ಚಾನಲ್ ನ ಆರೋಪವನ್ನು ಜನತೆ ನಂಬುವಂತಾಗಿದೆ.  ಸಂಶಯ ನಿವಾರಣೆಗೆ ತನಿಖೆಯೊಂದೇ ದಾರಿ ಎಂದು  ಟ್ವೀಟ್ ಮಾಡಿರುವ ಸಿದ್ಧರಾಮಯ್ಯ, ಮಾಧ್ಯಮದ ದಮನದ  ಅತಿರೇಕದ ಈ ಕ್ರಮದಿಂದಾಗಿ ಟಿವಿ ಚಾನಲ್ ನ ಆರೋಪವನ್ನು ಜನತೆ ನಂಬುವಂತಾಗಿದೆ.  ಈ ಕೂಡಲೇ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.power-tv-channel-live-bandh-former-cm-siddaramaiah-against-cm-bs-yeddyurappa

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಪುತ್ರ ಬಿ.ವೈ ವಿಜಯೇಂದ್ರ ಭ್ರಷ್ಟಾಚಾರ ನಡೆಸಿದ್ದಾರೆಂದು ಆರೋಪಿಸಿ  ವರದಿ ಮಾಡಿ ಪವರ್ ಟಿವಿ ರಾಜ್ಯದ ಗಮನ ಸೆಳೆದಿತ್ತು. ನಂತರ ಪವರ್ ಟಿವಿ ಲೈವ್ ಬಂದ್ ಮಾಡಲಾಗಿತ್ತು.

Key words: Power TV- Channel -Live Bandh-Former CM -Siddaramaiah –against- CM BS yeddyurappa