ಬೆಂಗಳೂರು,ಜೂ,1,2021(www.justkannada.in): ಸಚಿವ ಸಿ.ಪಿ ಯೋಗೇಶ್ವರ್ ನಂತರ ಇದೀಗ ಸಿಎಂ ಪುತ್ರ ಬಿವೈ ವಿಜಯೇಂದ್ರ ದೆಹಲಿಗೆ ಭೇಟಿ ನೀಡಿದ್ದು ತೀವ್ರ ಕುತೂಹಲ ಕೆರಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಇವರು ಪವರ್ ಬೆಗ್ಗರ್ಸ್ ಇವರ ಬಗ್ಗೆ ಮಾತನಾಡೋದು ಬೇಡ ಎಂದು ಹೇಳಿದರು.
ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ಬಿ.ಎಸ್ ಯಡಿಯೂರಪ್ಪ ಎಲ್ಲರನ್ನೂ ಕರೆತಂದರು. ಮೂರು ಪಕ್ಷ ಸುತ್ತಿ ಬಂದವರನ್ನ ಬಿಎಸ್ ಯಡಿಯೂರಪ್ಪ ಸೇರಿಸಿಕೊಂಡರು. ಈಗ ಬಿಎಸ್ ವೈ ಅವರೇ ಅನುಭವಿಸುತ್ತಿದ್ದಾರೆ. ಅನುಭವಿಸಲಿ ಎಂದು ಲೇವಡಿ ಮಾಡಿದರು.
ಸರ್ಕಾರದ ಪ್ಯಾಕೇಜ್ ಬಗ್ಗೆ ಟೀಕಿಸಿದ ಡಿ.ಕೆ ಶಿವಕುಮಾರ್, ಇದು ರಿಯಲ್ ಪ್ಯಾಕೇಜ್ ಅಲ್ಲ. ರೀಲ್ ಪ್ಯಾಕೇಜ್, ಆನ್ ಲೈನ್ ನಲ್ಲಿ ಯಾರು ಅರ್ಜಿ ಹಾಕ್ತಾರೆ ಎಂದು ಪ್ರಶ್ನಿಸಿದರು. ಉತ್ತರ ಕರ್ನಾಟಕ ಭಾಗದ ರೈತರ ಸ್ಥಿತಿ ಅಯೋಮಯವಾಗಿದೆ. ಹೂ ತರಕಾರಿ ಬೆಳಯುವವರ ಸ್ಥಿತಿ ಸಂಕಷ್ಟಕ್ಕೆ ಸಿಲುಕಿದೆ. ಅವರನ್ನ ಯಾರು ಕಾಪಾಡಬೇಕೆಂಬುದು ನನಗೆ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರ ರೈತರಿಂದ ತರಕಾರಿ, ಹೂ ಖರೀದಿಗೆ ಮುಂದಾಗಬೇಕು. ಕೃಷಿ ಮತ್ತು ತೋಟಗಾರಿಕೆ ಇಲಾಖೆ ರೈತರ ತರಕಾರಿ, ಹೂ ಖರೀದಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಡಿ.ಕೆ ಶಿವಕುಮಾರ್ ಆಗ್ರಹಿಸಿದರು.
Key words: Power Beggars- KPCC president -DK Shivakumar –minister-CP Yogeshwar-by vijayendra






