ಅಂಚೆ ಮತಗಳ ಎಣಿಕೆ: ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಮುನ್ನಡೆ

ಮೈಸೂರು, ಮೇ 13, 2023 (www.justkannada.in): ವಿಧಾನ ಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಮತ ಎಣಿಕೆ ಕೇಂದ್ರಗಳಲ್ಲಿ ಇದೀಗ ಅಂಚೆ ಮತಗಳ ಎಣಿಕೆ ಕಾರ್ಯ ಆರಂಭವಾಗಿದೆ.

ಮೈಸೂರಿನಲ್ಲಿ ನಡೆಯುತ್ತಿರುವ ಎಣಿಕೆ ಕಾರ್ಯಕ್ರದಲ್ಲಿ ಅಂಚೆ ಮತದಲ್ಲಿ ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಿಎಂ ಸಿದ್ದರಾಮಯ್ಯ ಅಂತರ ಕಾಯ್ದುಕೊಂಡಿದ್ದಾರೆ. ಮೊದಲ 30 ಮತಗಳಲ್ಲಿ 21ಮತಗಳನ್ನು ಸಿದ್ದರಾಮಯ್ಯ ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಕೇವಲ 9 ಮತ ಪಡೆದಿದ್ದಾರೆ.

ಇನ್ನು ಕೋಲಾರದಲ್ಲಿ ಅಂಚೆ ಮತ ಏಣಿಕೆ ನಡೆದಿದ್ದು, ಬಂಗಾರಪೇಟೆ, ಮುಳಬಾಗಲು, ಶ್ರೀನಿವಾಸಪುರದಲ್ಲಿ – ಜೆಡಿಎಸ್ಕೋಲಾರದಲ್ಲಿ ಬಿಜೆಪಿಕೆಜಿಎಫ್ ನಲ್ಲಿ ಕಾಂಗ್ರೆಸ್‌ಮಾಲೂರಿನಲ್ಲಿ ಪಕ್ಷೇತರರು ಮುನ್ನಡೆ ಕಾಯ್ದುಕೊಂಡಿದ್ದಾರೆ.

ಯಲಹಂಕ – ಶಾಸಕ- SR ವಿಶ್ವನಾಥ್( ಬಿಜೆಪಿ) – ಮುನ್ನಡೆ ಸಾಧಿಸಿದ್ದರೆ, ಬ್ಯಾಟರಾಯನಪುರ – ಕೃಷ್ಣ ಬೈರೇಗೌಡ( ಕಾಂಗ್ರೆಸ್) – ಮುನ್ನಡೆ ಕಾಯ್ದುಕೊಂಡಿದ್ದಾರೆ. ಯಶವಂತಪುರ- ಶಾಸಕ- ST ಸೋಮಶೇಖರ್( ಬಿಜೆಪಿ) – ಮುನ್ನಡೆ ದಾಸರಹಳ್ಳಿ – ಶಾಸಕ- ಆರ್.ಮಂಜುನಾಥ್ ( ಜೆಡಿಎಸ್) – ಮುನ್ನಡೆ ಬೆಂಗಳೂರು ದಕ್ಷಿಣ – M ಕೃಷ್ಣಪ್ಪ (ಬಿಜೆಪಿ) ಮುನ್ನಡೆ ಆನೇಕಲ್- ಬಿ.ಶಿವಣ್ಣ ( ಕಾಂಗ್ರೆಸ್) ಮುನ್ನಡೆ ಗಳಿಸಿದ್ಧಾರೆ.