Tuesday, September 22, 2026

BDA Apartments

ಉಪಕಾರ ಮಾಡಿದ್ರೆ ನನ್ನ ವಿರುದ್ದವೇ ಕೇಸ್ ಹಾಕಿದ್ದಾರೆ- ಮಾಜಿ ಸಿಎಂ ಬಿಎಸ್ ವೈ B...
Home Front Page ಉಪಕಾರ ಮಾಡಿದ್ರೆ ನನ್ನ ವಿರುದ್ದವೇ ಕೇಸ್ ಹಾಕಿದ್ದಾರೆ- ಮಾಜಿ ಸಿಎಂ ಬಿಎಸ್ ವೈ

ಉಪಕಾರ ಮಾಡಿದ್ರೆ ನನ್ನ ವಿರುದ್ದವೇ ಕೇಸ್ ಹಾಕಿದ್ದಾರೆ- ಮಾಜಿ ಸಿಎಂ ಬಿಎಸ್ ವೈ

ಬೆಂಗಳೂರು,ಮಾರ್ಚ್,15,2024(www.justkannada.in):  ತಮ್ಮ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿರುವ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ,  ತಾಯಿ ಮಗಳು ಅನ್ಯಾಯವಾಗಿದೆ ಎಂದು ಬಂದಿದ್ದರು. ಆ ವೇಳೆ ಉಪಕಾರ ಮಾಡಿದ್ರೆ ನನ್ನ ವಿರುದ್ದವೇ ಕೇಸ್ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಬಿಎಸ್ ಯಡಿಯೂರಪ್ಪ,  ತಾಯಿ ಮಗಳು ಅನೇಕ ಸಲ ಇಲ್ಲಿಗೆ ಬಂದು ಹೋಗಿದ್ರು.  ನನಗೆ ಅನ್ಯಾಯವಾಗಿದೆ.  ನಮಗೆ ನ್ಯಾಯ ಕೊಡಿಸಿ ಎಂದು ನನ್ನ ಬಳಿಗೆ ಬಂದಿದ್ದರು ಅದಾದ ಮೇಲೆ ನನ್ನ ಮೇಲೆ ಏನೇನೋ ಮಾತನಾಡಿದರು. ಅಮೇಲೆ ಕಮಿಷನರ್ ಬಳಿ ಕಳುಹಿಸಿಕೊಟ್ಟೆ. ಉಪಕಾರ ಮಾಡಿದ್ದರೇ ನನ್ನ ಮೇಲೆ ಕೇಸ್ ಹಾಕಿದ್ದಾರೆ. ಉಪಕಾರ ಮಾಡಿದ್ರೆ  ಏನಾಗುತ್ತೇ ನೋಡಿ ಇರಲಿ ಎಲ್ಲವನ್ನೂ ಎದರಿಸೋಣ ಎಂದರು.ಉಪಕಾರ ಮಾಡಿದ್ರೆ ನನ್ನ ವಿರುದ್ದವೇ ಕೇಸ್ ಹಾಕಿದ್ದಾರೆ bsy bsy 1

ಯಾರೋ ಒಬ್ಬಹೆಣ್ಣುಮಗಳು ದೂರು ಕೊಟ್ಟಿದ್ದಾರೆ ಎದುರಿಸೋಣ ಬಿಡಿ. ಈ ಕುರಿತು ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ.  ರಾಜಕೀಯ ಪ್ರೇರಿತ ಎಂದು ಹೇಳಲು ಇಷ್ಟಪಡಲ್ಲ. ಕೇಸ್ ಅನ್ನು ಕಾನೂನಿನ ಪ್ರಕಾರ ಎದುರಿಸುತ್ತೇನೆ ಎಂದು ಬಿಎಸ್ ವೈ ತಿಳಿಸಿದರು.

Key words: POSCO-Case-filed – Former CM- BS yeddyurappa