ಧರಣಿನಿರತ ರೈತರ ಭೇಟಿಗೆ ತೆರಳುತ್ತಿದ್ದ ವಿಪಕ್ಷಗಳ ನಿಯೋಗಕ್ಕೆ ಪೊಲೀಸರಿಂದ ತಡೆ…

ನವದೆಹಲಿ,ಫೆಬ್ರವರಿ,4,2021(www.justkannada.in):  ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ  ಸ್ಥಳಕ್ಕೆ ತೆರಳುತ್ತಿದ್ದ ವಿಪಕ್ಷಗಳ ನಾಯಕರ ನಿಯೋಗಕ್ಕೆ ಪೊಲೀಸರು ತಡೆ ನೀಡಿದ್ದಾರೆ.jk

ಧರಣಿನಿರತ ರೈತರನ್ನ ಭೇಟಿಯಾಗಲು ದೆಹಲಿಯ ಘಾಜಿಪುರ್ ಗಡಿಗೆ ಡಿಎಂಕೆ, ಎನ್ ಸಿಪಿ, ಟಿಎಂಸಿ, ಅಕಾಲಿಕದಳ ಸೇರಿ 8 ವಿಪಕ್ಷಗಳ ನಾಯಕರ ನಿಯೋಗ ಆಗಮಿಸಿತ್ತು. ಆದರೆ ರೈತರ ಭೇಟಿಗೆ ಪೊಲೀಸರು ಅವಕಾಶ ನೀಡದೇ ನಿಯೋಗವನ್ನ ತಡೆದಿದ್ದಾರೆ. ಡಿಎಂಕೆಯ ಕನ್ನಿಮೊಳಿ ಸೇರಿ ವಿಪಕ್ಷ ನಾಯಕರು ಆಗಮಿಸಿದ್ದರು.

ಈ ಹಿನ್ನೆಲೆಯಲ್ಲಿ  ವಿಪಕ್ಷ ನಾಯಕರ ನಿಯೋಗ ವಾಪಸ್ ಆಗಿದೆ.  ಪ್ರತಿಭಟನಾನಿರತ ರೈತರನ್ನು ಭೇಟಿ ಮಾಡಲು ಗಾಜಿಪುರ ಗಡಿಗೆ ಆಗಮಿಸಿದ ವಿರೋಧ ಪಕ್ಷದ ನಾಯಕರನ್ನು ದೆಹಲಿ ಪೊಲೀಸರು ಬ್ಯಾರಿಕೇಡ್ ದಾಟಿ ಮುಂದೆ ಸಾಗದಂತೆ ತಡೆದಿದ್ದಾರೆ.

Police -obstruct -delegation - opposition parties-farmer-protest
ಕೃಪೆ- internet

ಇನ್ನು ಪ್ರತಿಭಟನಾನಿರತ ರೈತರು ದೆಹಲಿಯತ್ತ ಹೋಗದಂತೆ ರಸ್ತೆಯಲ್ಲಿ ಮೊಳೆಗಳನ್ನು ಅಳವಡಿಸಲಾಗಿತ್ತು. ಘಾಜಿಪುರ ಗಡಿಯಲ್ಲಿ ಬ್ಯಾರಿಕೇಡ್ ಗಳ ಬಳಿ ರಸ್ತೆಗಳಲ್ಲಿ ಅಳವಡಿಸಲಾದ ಉದ್ದನೆಯ ಮೊಳೆಗಳನ್ನು ತೆಗೆಯಲಾಗುತ್ತಿದೆ.

ENGLISH SUMMARY…

Police stop opposition parties that were en route to meet protesting farmers in Delhi
New Delhi, Feb. 4, 2021 (www.justkannada.in): The delegation of opposition party leaders, which were going to meet the protesting farmers in New Delhi, was stopped by the Police.
The delegation comprising leaders of eight different political parties including, DMK, NCP, TMC, Akali Dal were going towards the Ghazipur border in Delhi to meet the protestors. But the police stopped them without giving them permission to meet the protests. The delegation included leaders like Kannimozi.

Police -obstruct -delegation - opposition parties-farmer-protest
ಕೃಪೆ- internet

Following the incident, the delegation has returned. Meanwhile, the nails that were put on the roads near the barricades that have been installed on the Ghajipur border are being removed.
Keywords: Police stop opposition delegation/ New Delhi/ protest/ farmers

Key words: Police -obstruct -delegation – opposition parties-farmer-protest