ಮಗಳು ಪ್ರೀತಿಸಿ ಮದುವೆಯಾಗಿದ್ದಕ್ಕೆ ಪೋಷಕರ ಕೋಪ: ಅಡಿಕೆ ಮರಗಳು ನಾಶ….

ತುಮಕೂರು,ಫೆಬ್ರವರಿ,4,2021(www.justkannada.in):   ಪುತ್ರಿ ಪ್ರೀತಿಸಿ ಮದುವೆಯಾಗಿದ್ದಕ್ಕೆ ಕೋಪಗೊಂಡ ಪೋಷಕರು ಆಕೆಯ ಗಂಡನಿಗೆ ಸೇರಿದ್ಧ ಅಡಿಕೆ ಗಿಡಗಳನ್ನ ನಾಶಪಡಿಸಿರುವ ಘಟನೆ ನಡೆದಿದೆ. jk

ತುಮಕೂರು ಜಿಲ್ಲೆಯ ಮಲ್ಲಸಂದ್ರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಲ್ಲಸಂದ್ರ ಗ್ರಾಮದ ರವಿಚಂದ್ರ ಮತ್ತು ಅನು ಇಬ್ಬರು ಪರಸ್ಪರ ಪ್ರೀತಿಸಿದ್ದರು. ಈ ನಡುವೆ ಎರಡು ದಿನಗಳ ಹಿಂದೆ ರವಿಚಂದ್ರ ಮತ್ತು ಅನು ದೇವಾಸ್ಥಾನದಲ್ಲಿ ಮದುವೆಯಾಗಿದ್ದಾರೆ.Parents- anger – daughter-love marriage-Destroy - nut trees….

ಇದನ್ನು ಸಹಿಸದ ಹುಡುಗಿಯ ಪೋಷಕರು  ರವಿಚಂದ್ರಗೆ ಸೇರಿದ್ಧ ಸುಮಾರು 7 ರಿಂದ 8 ವರ್ಷಗಳ ಕಾಲ ಬೆಳೆಸಿದ್ದ ಅಡಿಕೆಗಿಡಗಳನ್ನ ನಾಶಪಡಿಸಿ ತಮ್ಮ ಕೋಪವನ್ನ ತೀರಿಸಿಕೊಂಡಿದ್ದಾರೆ ಎನ್ನಲಾಗಿದೆ.

 

Key words: Parents- anger – daughter-love marriage-Destroy – nut trees….