Sunday, September 20, 2026

BDA Apartments

ಪೋಕ್ಸೋ ಪ್ರಕರಣ: ಮುರುಘ ಶ್ರೀ ಮತ್ತೆ ಅರೆಸ್ಟ್ BDA JK_Adv BDA Adv
Home Crime ಪೋಕ್ಸೋ ಪ್ರಕರಣ: ಮುರುಘ ಶ್ರೀ ಮತ್ತೆ ಅರೆಸ್ಟ್.

ಪೋಕ್ಸೋ ಪ್ರಕರಣ: ಮುರುಘ ಶ್ರೀ ಮತ್ತೆ ಅರೆಸ್ಟ್.

ದಾವಣಗೆರೆ, ನವೆಂಬರ್, 20,2023(www.justkannada.in): ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ  ಮುರುಘ ಶ್ರೀ ಮತ್ತೆ  ಬಂಧನವಾಗಿದೆ.

2ನೇ ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀಗೆ ಬಂಧನ ವಾರೆಂಟ್ ಜಾರಿ ಮಾಡಿ ಚಿತ್ರದುರ್ಗ  2ನೇ ಅಪರ  ಜಿಲ್ಲಾ ಮತ್ತು ಸತ್ರ ನ್ಯಾಯಾಲಯ  ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಮುರುಘ ಶ್ರೀ ಮತ್ತೆ ಅರೆಸ್ಟ್ ಆಗಿದ್ದಾರೆ.

ಎರಡನೇ ಪೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗ ನ್ಯಾಯಾಲಯ ಜಾರಿ ಮಾಡಿದ ಅರೆಸ್ಟ್ ವಾರೆಂಟ್ ಮೇರೆಗೆ ಮುರುಘಾಶ್ರಿಯನ್ನು ಬಂಧಿಸಿದ್ದಾರೆ. ಇಂದು ಕೋರ್ಟ್ ಅರೆಸ್ಟ್​ ವಾರೆಂಟ್ ಆದೇಶದ ಪ್ರತಿಪಡೆದುಕೊಂಡ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ನೇರವಾಗಿ ದಾವಣಗೆರೆಯ ವಿರಕ್ತ ಮಠಕ್ಕೆ ತೆರಳಿ ಮುರುಘಾಶ್ರೀಗಳನ್ನು ಬಂಧಿಸಿದ್ದಾರೆ.ಪೋಕ್ಸೋ ಪ್ರಕರಣ muruga muruga 1

ಮೊದಲನೇ ಪೋಕ್ಸೋ ಪ್ರಕರಣದಲ್ಲಿ ಜಾಮೀನು ಪಡೆದು ಮುರುಘಾಶ್ರೀ ನವೆಂಬರ್ 16ರಂದು  ಜೈಲಿನಿಂದ ಬಿಡುಗಡೆಯಾಗಿದ್ದರು. ಆದರೆ ಇದೀಗ ನಾಲ್ಕೇ ದಿನದಲ್ಲಿ ಮತ್ತೆ ಬಂಧನವಾಗಿದೆ.

Key words: POCSO- case- Muruga Shr–arrested -again.