ಮಾಜಿ ಪ್ರಧಾನಿ ಹೆಚ್.​ಡಿ ದೇವೇಗೌಡರೇ ಜೆಡಿಎಸ್ ರಾಷ್ಟ್ರಾಧ್ಯಕ್ಷರಾಗಿ ಇರುವುದು ಅನುಮಾನ: ಸಿಎಂ ಇಬ್ರಾಹಿಂ.

ಬೆಂಗಳೂರು, ನವೆಂಬರ್, 20,2023(www.justkannada.in):  ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಇರುತ್ತಾರೋ ಇಲ್ಲವೋ ಎಂಬುದೇ ಅನುಮಾನವಿದೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಇಬ್ರಾಹಿಂ, ನಾನು ಈಗಲೂ ಜೆಡಿಎಸ್ ರಾಜ್ಯಾಧ್ಯಕ್ಷನೇ. ದೇವೇಗೌಡರೇ ರಾಷ್ಟ್ರಾಧ್ಯಕ್ಷರಾಗಿ ಇರುತ್ತಾರೋ ಇಲ್ಲವೋ ಎಂಬ ಅನುಮಾನವಿದೆ. ಆ ಬಗ್ಗೆ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ನಿರ್ಧಾರ ಆಗಲಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಕಾರ್ಯಕಾರಣಿ ನಿರ್ಧಾರ ಕೈಗೊಂಡರೆ ಏನು ಮಾಡುತ್ತಾರೆ? ಒಬ್ಬ ವ್ಯಕ್ತಿ ತೆಗೆಯುತ್ತಿಲ್ಲ. ರಾಷ್ಟ್ರೀಯ ಕಾರ್ಯಕಾರಣಿ ಸಭೆ ಮಾಡಿ ಸ್ಥಾನದಿಂದ ತೆಗೆದುಹಾಕಿದರೆ ಏನು ಮಾಡುತ್ತೀರಿ? ಮಗನಿಗಾಗಿ ಈ ತರ ಮಾಡಿದ್ರೆ ಏನು ಮಾಡ್ತೀರಾ? ಈಗಲೂ ಮನವಿ ಮಾಡುತ್ತೇವೆ, ನಿರ್ಣಯವನ್ನು ವಾಪಸ್ ಪಡೆಯಿರಿ ಎಂದು ಆಗ್ರಹಿಸಿದರು.

ಮಗನ ಮಾತು ಕೇಳಿ ಹೆಚ್.ಡಿ ದೇವೇಗೌಡರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಹೆಚ್.ಡಿಕುಮಾರಸ್ವಾಮಿ ಏಕಾಏಕಿ ಮೈತ್ರಿ ಮಾಡಿಕೊಂಡಿದ್ದಾರೆ. ದೇವೇಗೌಡರಿಗೆ ಮತ್ತೊಂದು ಅವಕಾಶ ನೀಡುತ್ತೇನೆ. ಡಿಸೆಂಬರ್ 9ರವರೆಗೂ ಅವಕಾಶ ನೀಡುತ್ತೇನೆ.  ಡಿ 9ರೊಳಗೆ ನಿರ್ಣಯ ವಾಪಸ್ ಪಡೆಯದಿದ್ದರೇ ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದರು .

Key words: Former PM-HD Deve Gowda – doubtful – JDS- National President-CM Ibrahim.