ಪ್ರಧಾನಿ ಮೋದಿ ತಾಯಿ ಹೀರಾಬೆನ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು.

ಅಹಮದಾಬಾದ್,ಡಿಸೆಂಬರ್,28,2022(www.justkannada.in): ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್  ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅಹಮದಾಬಾದ್ ​ನ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ನಡುವೆ  ಹೀರಾಬೆನ್ ಅವರ ಆರೋಗ್ಯದ ಬಗ್ಗೆ ಆಸ್ಪತ್ರೆ ಬುಲೆಟಿನ್ ಹೊರಡಿಸಿದ್ದು, ಹೀರಾಬೆನ್ ಅವರ ಆರೋಗ್ಯ  ಸ್ಥಿರವಾಗಿದೆ. ಶತಾಯಿಷಿ  ಹೀರಾಬೆನ್ ಅವರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿಸಿದೆ.

ಇನ್ನು ಆಸ್ಪತ್ರೆಗೆ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಭೇಟಿ  ನೀಡಿ  ಹೀರಾಬೆನ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ ಆಸ್ಪತ್ರೆಗೆ ಭೇಟಿ ನೀಡಿ ತಾಯಿಯ ಆರೋಗ್ಯ ವಿಚಾರಿಸಲಿದ್ದಾರೆ.  ಪ್ರಧಾನಿ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಮತ್ತು ಕುಟುಂಬದವರ ಕಾರು ಮೈಸೂರಿನ ಕಡಕೊಳ ಬಳಿ ಮಂಗಳವಾರ ಅಪಘಾತಕ್ಕೀಡಾಗಿತ್ತು.

Key words: PM Modi’s- mother- Heeraben’s- health- admitted – hospital.