Sunday, October 4, 2026

BDA Apartments

Home Front Page ಏ.9 ರಂದು ಬಂಡಿಪುರಕ್ಕೆ ಪ್ರಧಾನಿ ಮೋದಿ ಭೇಟಿ: ಪ್ರವಾಸಿಗರ ಸಫಾರಿ ಬಂದ್.

ಏ.9 ರಂದು ಬಂಡಿಪುರಕ್ಕೆ ಪ್ರಧಾನಿ ಮೋದಿ ಭೇಟಿ: ಪ್ರವಾಸಿಗರ ಸಫಾರಿ ಬಂದ್.

ಚಾಮರಾಜನಗರ,ಏಪ್ರಿಲ್,1,2023(www.justkannada.in): ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 9 ರಂದು ರಾಜ್ಯ ಪ್ರವಾಸ ಕೈಗೊಂಡಿದ್ದು ಈ ವೇಳೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೈಸೂರು ಮತ್ತು ಚಾಮರಾಜನಗರಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ, ಹುಲಿ ಯೋಜನೆ’ಗೆ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಆಯೋಜಿಸಿರುವ ಮೂರು ದಿನಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ. ಏ.9 ರಂದು ಬಂಡಿಪುರಕ್ಕೆ ಪ್ರಧಾನಿ ಮೋದಿ ಭೇಟಿ: ಪ್ರವಾಸಿಗರ ಸಫಾರಿ ಬಂದ್ pm modi

ಏ9 ರಂದು ಬಂಡಿಪುರಕ್ಕೆ ಮೋದಿ ಭೇಟಿ ಹಿನ್ನೆಲೆ ಏಪ್ರಿಲ್ 8 ಮತ್ತು ಏಪ್ರಿಲ್ 9 ರಂದು ಪ್ರವಾಸಿಗರ ಸಫಾರಿ ಬಂದ್ ಆಗಲಿದೆ. ಅತಿಥಿಗೃಹ ಕಾಟೇಜ್ ಸಹ ಬಂದ್ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.  ಪ್ರಧಾನಿ ಮೋದಿ  ಭೇಟಿಗೆ ಬಂಡಿಪುರದಲ್ಲಿ ಸಿದ್ದತೆ ನಡೆಸಲಾಗುತ್ತಿದ್ದು, ಹಿರಿಯ ಪೊಲೀ ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.  ಮೇಳುಕಾಮನಹಗಳ್ಳಿ ಬಳಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುತ್ತಿದೆ.

Key words: PM Modi- visit – Bandipur – April 9-Tourists- safari- bandh