ಇಂದು ಡೆನ್ಮಾರ್ಕ್ ಪಿಎಂ ಜೊತೆ ಪ್ರಧಾನಿ ಮೋದಿ ವಿಡೀಯೋ ಸಂವಾದ

ನವದೆಹಲಿ, ಸೆಪ್ಟೆಂಬರ್ 28, 2020 (www.justkannada.in): ಡೆನ್ಮಾರ್ಕ್ ಪ್ರಧಾನಮಂತ್ರಿ ಮೆಟ್ಟೆ ಫೆಡರಿಕ್‍ಸೆನ್ ಜೊತೆ ಪ್ರಧಾನಿ ನರೇಂದ್ರ ಮೋದಿ ಇಂದು ಮಾತುಕತೆ ನಡೆಸಲಿದ್ದಾರೆ.

ಇಂದು ನಡೆಯುವ ಮಹತ್ವದ ಶೃಂಗಸಭೆ ಉಭಯ ದೇಶಗಳ ನಡುವಣೆ ದ್ವಿಪಕ್ಷೀಯ ಸಂಬಂದ ಸುಧಾರಣೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಯಾಗಲಿದೆ.

ಇಂಡೋ-ಡೆನ್ಮಾರ್ಕ್ ಶೃಂಗಸಭೆಯಲ್ಲಿ ಮೋದಿ ಮತ್ತು ಮೆಟ್ಟೆ ವಿಡಿಯೋ ಲಿಂಕ್ ಮೂಲಕ ಚರ್ಚೆ ನಡೆಸಲಿದ್ದು, ಉಭಯ ದೇಶಗಳ ನಡುವೆ ಪರಸ್ಪರ ಹಿತಾಸಕ್ತಿಗಳಿಗೆ ಪೂರಕವಾಗಿ ವಿಷಯಗಳನ್ನು ಸಮಾಲೋಚಿಸಲಿದ್ದಾರೆ.

ಭಾರತ ಮತ್ತು ಶ್ರೀಲಂಕಾ ನಡುವೆ ಮೊನ್ನೆ ನಡೆದ ಮಹತ್ವದ ಶೃಂಗಸಭೆಯಲ್ಲಿ ಉಭಯ ದೇಶಗಳ ನಡುವಣ ಬಾಂಧವ್ಯ ಬಲವರ್ಧನೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಯಾಗಿದೆ.