ಸಾಕಷ್ಟು ದಿನಗಳ ಬಳಿಕ ಇಳಿಕೆ ಹಾದಿಯಲ್ಲಿ ಚಿನ್ನದ ದರ

ನವದೆಹಲಿ, ಸೆಪ್ಟೆಂಬರ್ 28, 2020 (www.justkannada.in): ಸಾಕಷ್ಟು ದಿನಗಳ ಬಳಿ ಚಿನ್ನದ ದರದಲ್ಲಿ ಇಳಿಕೆ ಕಂಡು ಬರುತ್ತಿದೆ.

ಹೌದು. ಕಳೆದ ಒಂದು ವಾರದಿಂದ ಇಳಿಕೆಯ ಹಾದಿಯಲ್ಲಿ ಸಾಗುತ್ತಿದೆ. ದಿನನಿತ್ಯದ ಬೆಲೆ ಏರಿಳಿತ ಕಂಡರೂ ವಾರದ ಸರಾಸರಿ ಬೆಲೆಯಲ್ಲಿ ಇಳಿಕೆಯಾಗಿದೆ.

ಎಂಸಿಎಕ್ಸ್‌ನಲ್ಲಿ ಕಳೆದ ವಾರಾತ್ಯಂಕ್ಕೆ ಪ್ರತಿ 10 ಗ್ರಾಂ ಚಿನ್ನ 49,66ರೂಪಾಯಿಗೆ ಇಳಿಕೆಯಾಗಿತ್ತು. ಬೆಳ್ಳಿಯ ಬೆಲೆಯೂ ಇಳಿಕೆಯಾಗಿತ್ತು. ಕಳೆದ ಒಂದು ವಾರದಲ್ಲಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 9 ಸಾವಿರ ರೂ ಇಳಿಕೆಯಾಗಿದೆ.

ಮಾರುಕಟ್ಟೆ ತಜ್ಞರು ಈ ವಾರ ಕೂಡ ಈ ಅಮೂಲ್ಯ ಲೋಹಗಳ ಬೆಲೆ ಮತ್ತಷ್ಟು ಇಳಿಕೆಯಾಗಬಹುದು ಎಂದು ಅಂದಾಜಿಸಿದ್ದಾರೆ. ಪ್ರತಿ 10 ಗ್ರಾಂ ಚಿನ್ನದ ಬೆಲೆ ಸುಮಾರು 48 ಸಾವಿರದ ಆಸುಪಾಸಿಗೆ ಇಳಿಯಬಹುದು ಎನ್ನಲಾಗಿದೆ.