ಖ್ಯಾತ ಸಾಹಿತಿ, ವಿಮರ್ಶಕ ಜಿ.ಎಸ್.ಅಮೂರ ನಿಧನ

ಬೆಂಗಳೂರು,ಸೆಪ್ಟೆಂಬರ್,28,2020(www.justkannada.in) : ಖ್ಯಾತ ವಿಮರ್ಶಕ ಜಿ.ಎಸ್.ಅಮೂರ ಅವರು ಸೋಮವಾರ ಮುಂಜಾನೆ ನಿಧನರಾದರು. jk-logo-justkannada-logoಡಾ.ಜಿ.ಎಸ್.ಅಮೂರ ಅವರು ಈಚೆಗಷ್ಟೆ ಪ್ರಕಟವಾದ 2020ನೇ ಸಾಲಿನ ನೃಪತುಂಗ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಅಮೂರ ಅವರು ಕೆಲ ವರ್ಷಗಳಿಂದ ಬೆಂಗಳೂರಿನ ಪುತ್ರನ ಮನೆಯಲ್ಲಿದ್ದರು. ಕನ್ನಡ ಸಾಹಿತ್ಯ ವಿಮರ್ಶಾ ಕ್ಷೇತ್ರಕ್ಕೆ ಅಮೂರ ಕೊಡುಗೆ ಅಪಾರವಾಗಿದೆ.Celebrity-Literary-Critic-G.S.Amura-passes-away

ಗುರುರಾಜ ಶ್ಯಾಮಾಚಾರ ಅಮೂರ 1925ರಲ್ಲಿ ಧಾರವಾಡ ಜಿಲ್ಲೆ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಜನಿಸಿದರು. ಹಾವೇರಿಯಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಶಿಕ್ಷಣ ಮುಗಿಸಿ, 1942ರಲ್ಲಿ ಮುಂಬೈನಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಬಿ.ಎ.ಆನರ್ಸ್ ಇಂಗ್ಲಿಷ್ ವಿಷಯದಲ್ಲಿ ಪೂರೈಸಿದರು. ನಂತರ ಮುಂಬೈನ ವಿವಿಯಲ್ಲಿ ಎಂ.ಎ.ಪದವಿ ಪಡೆದರು.

ಕನ್ನಡ ವಿಮರ್ಶ ಕ್ಷೇತ್ರದ ಸಾಧನೆ

ಕನ್ನಡ ವಿಮರ್ಶ ಕ್ಷೇತ್ರದಲ್ಲಿ ಹೆಸರು ಮಾಡಿರುವ ಜಿ.ಎಸ್.ಅಮೂರ ಅವರು, ಮಹಾಕವಿ ಮಿಲ್ಟನ್, ಕೃತಿ ಪರೀಕ್ಷೆ, ಅ.ನ.ಕೃಷ್ಣರಾಯ, ಭುವನದ ಭಾಗ್ಯ, ಕನ್ನಡ ಕಥನ ಸಾಹಿತ್ಯ, ಕಾದಂಬರಿ ಸ್ವರೂಪ, ದ.ರಾ.ಬೇಂದ್ರೆ, ಕಥನ ಶಾಸ್ತ್ರ, ಸೀಮೊಲ್ಲಂಘನ, Adya Rangachar, A critical spectrum, Images and Impressions, A.N.Krishnarao, The Concept of Comedy, Poetics of T.S.Eliot, Essays on modern kannada literature ಹೀಗೆ ಹಲವಾರು ಅಮೂಲ್ಯ ಕೃತಿಗಳನ್ನು ಕನ್ನಡ ವಿಮರ್ಶಾ ಕ್ಷೇತ್ರಕ್ಕೆ ಕೊಡುಗೆಯಾಗಿದೆ.

ಸಾಧನೆಗೆ ಹಲವು ಪ್ರಶಸ್ತಿ, ಗೌರವ ಒಲಿದಿವೆ

ಇವರ ಸಾಹಿತ್ಯ ಸಾಧನೆಗೆ ಹಲವು ಪ್ರಶಸ್ತಿಗಳು, ಗೌರವ ಸಂದಿವೆ. ಭುವನದ ಭಾಗ್ಯ ಕೃತಿಗೆ 1996ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಅಲ್ಲದೇ, ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ(ಕೊಲ್ಕತ್ತಾ), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(1999) ಅಭಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ, ಅ.ನ.ಕೃ.ಪ್ರಶಸ್ತಿ, ಪಂಪ ಪ್ರಶಸ್ತಿ, ಬೆಳಗಾವಿಯ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಪ್ರತಿಷ್ಠಾನವು ನೀಡುವ ಡಾ.ಬೆಟಗೇರಿ ಕೃಷ್ಣಶರ್ಮ ವಿಮರ್ಶಾ ಪ್ರಶಸ್ತಿಗಳು ಒಲಿದು ಬಂದಿವೆ.

key words : Celebrity-Literary-Critic-G.S.Amura-passes-away